ನಿದ್ರೆ ಮಾತ್ರೆ ಸೇವಿಸಿ ಖ್ಯಾತ ಗಾಯಕಿ ಆತ್ಮಹತ್ಯೆಗೆ ಯತ್ನ

Public TV
1 Min Read
Kalpana Raghavendar

ಕ್ಷಿಣ ಭಾರತದ ಸ್ಟಾರ್ ಗಾಯಕಿ ಕಲ್ಪನಾ ರಾಘವೇಂದರ್ (Kalpana Raghavendar) ಅವರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಗಾಯಕಿಯನ್ನು ದಾಖಲಿಸಲಾಗಿದೆ.

Kalpana Raghavendar 1

ಹೈದರಾಬಾದ್‌ನ ನಿವಾಸದಲ್ಲಿ ಮಾರ್ಚ್ 2ರಂದು ಗಾಯಕಿ ಆತ್ಮಹತ್ಯೆಗೆ ಯತ್ನಿಸಿದ್ದು, 2 ದಿನಗಳಿಂದ ಮನೆಯ ಬಾಗಿಲುಗಳು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ಗಾಯಕಿಯ ಮನೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ, ಅವರು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಲ್ಪನಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗಾಯಕಿಗೆ ಪ್ರಜ್ಞೆ ಬಂದಿದೆ. ಕಲ್ಪನಾಗೆ ಸದ್ಯ ಯಾವುದೇ ರೀತಿಯ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಗೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಇನ್ನೂ ಕಲ್ಪನಾ ಅವರು ಸಂಗೀತ ದಿಗ್ಗಜರಾದ ಇಳಯರಾಜ ಹಾಗೂ ರೆಹಮಾನ್ ಅವರೊಂದಿಗೆ ಕೆಲಸ ಮಾಡಿದವರು. 1500ಕ್ಕೂ ಹೆಚ್ಚು ಹಾಡುಗಳನ್ನು ಗಾಯಕಿ ಹಾಡಿದ್ದಾರೆ. ಅದಷ್ಟೇ ಅಲ್ಲ, ತೆಲುಗಿನ ಬಿಗ್ ಬಾಸ್ ಸೀಸನ್ 1ರ ಸ್ಪರ್ಧಿ ಕೂಡ ಆಗಿದ್ದರು.

Share This Article