ಕಲಬುರಗಿ: ರಾಜ್ಯದಲ್ಲಿ ನಮ್ಮ ಹಾವೇರಿಯ ಕುರಿಗಾಹಿ, ಗಾಯಕ ಹನುಮಂತ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂತಹ ಹನುಮಂತರನ್ನು ಕಲಬುರಗಿಯ ಓರ್ವ ಆಯೋಜಕರು ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ. ಇದು ಇದೀಗ ಕಲಬುರಗಿ ಸೇರಿದಂತೆ ರಾಜ್ಯದ ಜನರಲ್ಲಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹನುಮಂತು ಅಂದ್ರೆ ಸಾಕು ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿಯೇ ಕಲಬುರಗಿಯಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮ ಆಯೋಜಿಸಿ (ದಿ ಸ್ಟಾರ್ ವರ್ಲ್ಡ್ ಹಾನರ್ಸ್ ದಿ ಬ್ರೇವ್ ಹಾರ್ಟ್ಸ್) ಆಯೋಜಕರು ಹನುಮಂತರನ್ನು ಕರೆಸಿದ್ದರು. ಹೀಗಾಗಿ ಅವರ ಅಪಾರ ಅಭಿಮಾನಿಗಳು ಜವಾರಿ ಸಾಂಗ್ ಕೇಳಲು ಕಾಯುತ್ತಿದ್ದರು. ಅಷ್ಟರಲ್ಲಿ ಅಲ್ಲಿ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಹನುಮಂತ ಅವರ ವೇಷ ಭೂಷಣ ಕಂಡು ಜೋಕ್ ಮಾಡಿದ್ದು, ಹಿಂದಿಯಲ್ಲಿ ಮಾತನಾಡಲು ಹೇಳಿ ಹನುಮಂತನಿಗೇ ಕಿಂಡಲ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆ ನಿರೂಪಕ ನಿನಗೆ ಹಿಂದಿ ಬರಲ್ಲ ನನಗೇ ಕನ್ನಡ ಬರಲ್ಲ ಅಂತಾ ಹನುಮಂತನ ಕೈಯಲ್ಲಿದ್ದ ಮೈಕ್ ಕಸಿದುಕೊಂಡಿದ್ದಾರೆ. ಆ ಮೈಕ್‍ನ್ನು ಕಸಿದು ಹಿಂದಿ ಬಿಗ್‍ಬಾಸ್-9ರ ಸೀಸನ್‍ನ ಖ್ಯಾತಿಯ ನಟಿ ಸೋನಾಲಿ ರಾವತ್‍ಗೆ ನೀಡಿದ್ದಾರೆ. ಇದನ್ನೂ ಓದಿ: ಸರಿಗಮಪ ವೇದಿಕೆಯಲ್ಲಿ ಹನುಮಂತ ತಂಗಿಗೆ ಸಿಕ್ತು ಅಚ್ಚರಿಯ ಉಡುಗೊರೆ
Advertisement
Advertisement
ಈ ಕಾರ್ಯಕ್ರಮಕ್ಕೆ ಡಬ್ಲೂಡಬ್ಲೂಇ ಖ್ಯಾತಿಯ ದಿ ಗ್ರೇಟ್ ಖಲಿ ಸಹ ಆಗಮಿಸಿದ್ದು, ಖಲೀ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ ಇತರೆ ಕಲಾವಿದರನ್ನು ವೇದಿಕೆಗೆ ಕರೆಯಲಾಗಿತ್ತು. ಆದರೆ ಮುಗ್ಧ ಮನಸ್ಸಿನ ಹನುಮಂತನನ್ನು ಮೈಕ್ ಕಸಿದು ಕೆಳಗೆ ಕಳುಹಿಸಿದ ನಂತರ ಸೌಜನ್ಯಕ್ಕೂ ಸಹ ವೇದಿಕೆಗೆ ಕರೆಯಲಿಲ್ಲ. ಅದೇ ವೇದಿಕೆಯಲ್ಲಿ ಹಿಂದಿಯ ಸರಿಗಮಪ ಸಿಂಗರ್, ಜಯಶ್ ಕುಮಾರ್ ಕನ್ನಡದ ಚುಟು ಚುಟು ಅಂತೈದೇ ಅಂತಾ ಹಾಡು ಹಾಡಲು ಮುಂದಾದ್ರೆ, ಆತನ ಹಾಡಿಗೆ ಮ್ಯೂಸಿಕ್ ಹಾಕದೇ ಅರ್ಧದಲ್ಲಿಯೇ ಆತನ ಹಾಡು ನಿಲ್ಲಿಸಲಾಯ್ತು. ಆತನನ್ನು ಸಹ ವೇದಿಕೆಯಿಂದ ಕರೆಸಿ ಮತ್ತೆ ಕನ್ನಡಕ್ಕೆ ಅವಮಾನ ಮಾಡಲಾಯಿತು. ಇದನ್ನೂ ಓದಿ: ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ
Advertisement
Advertisement
ಹನುಮಂತ ಬರ್ತಾರೆ ಅಂತ ಬಹುತೇಕರು ಕಾರ್ಯಕ್ರಮಕ್ಕೆ ಬಂದಿದ್ದರು. ಹಿಂದಿ ನಟರು ಬಂದ ಕೂಡಲೇ ಹನುಮಂತರ ಮೈಕ್ ಕಸಿದುಕೊಂಡರು. ಹಿಂದಿ ಗಾಯಕರಿಂದಲೇ ಹಾಡುಗಳನ್ನು ಹಾಡಿಸಿದರು. ಹನುಮಂತ ಅವರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಕಾರ್ಯಕ್ರಮ ನಿರೂಪಕ ಅವಮಾನ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿಸಲು ಆಯೋಜಕರು ಹಿಂದೇಟು ಹಾಕಿದ್ದು ಕನ್ನಡಕ್ಕೆ ಅವಮಾನವಾಗಿದೆ. ಇಲ್ಲಿ ಕೇವಲ ಹನುಮಂತ ಅವರಿಗೆ ಮಾತ್ರ ಅವಮಾನವಾಗಿಲ್ಲ, ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಕನ್ನಡಿಗರು ಅವಮಾನವಾದಂತೆ ಎಂದು ಕರವೇ ಸದಸ್ಯ ರವಿ ಖಂಡಿಸಿದ್ದಾರೆ. ಇದನ್ನೂ ಓದಿ: ಮೈ ಮರೆತು ಹಾಡು ಹೇಳ್ತಿದ್ದ ಹನುಮಂತನ ಮೊಬೈಲ್ ಕದ್ದ ಕಳ್ಳರು
ಹನುಮಂತನನ್ನು ವೇದಿಕೆಯೇ ಅವಮಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಮಳೆ ಬಂದಿರುವ ಹಿನ್ನೆಲೆ, ಕಾರ್ಯಕ್ರಮವನ್ನು ಆಯೋಜಕರು ಸ್ಥಗಿತ ಮಾಡಿ ಸ್ಥಳದಿಂದ ಕಾಲ್ಕಿತ್ತರು. ಈ ಮೂಲಕ ಹನುಮಂತು ಹಾಡಿಗಾಗಿ ಬಂದಿದ್ದ ಅಭಿಮಾನಿಗಳು ಗಾಯಕನಿಗೆ ಅವಮಾನ ಹಾಗೂ ಹಾಡು ಕೇಳದ ಹಿನ್ನೆಲೆ ಆಕ್ರೋಶ ಹೊರಹಾಕಿದರು. ನೂರಾರು ಕಿಮೀನಿಂದ ದೂರ ಕರೆಸಿ ಈ ರೀತಿ ಅವಮಾನ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದೇ ಒಂದು ಚಾನ್ಸ್ ಕೊಡಿ – ಹನುಮಂತ ಅಭಿಮಾನಿ ಮನವಿ