ರಾಯಚೂರು: ಆಸ್ತಿಗಾಗಿ (Property) ಕೌಟುಂಬಿಕ ಕಲಹ (Family Feud) ಹಿನ್ನೆಲೆ ತಾಯಿಯನ್ನೇ ಮಗ ಕೊಂದು ಪರಾರಿಯಾಗಿರುವ ಘಟನೆ ರಾಯಚೂರಿನ (Raichur) ಲಿಂಗಸೂಗೂರು (Lingasuguru) ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ನಡೆದಿದೆ.
ಚಂದವ್ವ (55) ಕೊಲೆಯಾದ ಮಹಿಳೆ. ಕುಮಾರ ತಾಯಿಯನ್ನೇ ಕೊಲೆ ಮಾಡಿ ಪರಾರಿಯಾದ ಪಾಪಿ ಮಗ. ಮದ್ಯದ ನಶೆಯಲ್ಲಿ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕುಮಾರ ಗ್ರಾಮಕ್ಕೆ ಬಂದಿದ್ದ. ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣತಮ್ಮಂದಿರಬ್ಬರಿಗೆ ಪಾಲು ಮಾಡುವಂತೆ ಕುಮಾರ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ತಾಯಿ ಆಸ್ತಿ ಭಾಗಮಾಡಲು ಒಪ್ಪಿರಲಿಲ್ಲ, ಇದರಿಂದ ಮಾತಿನ ಚಕಮಕಿ ನಡೆದು ಶುರುವಾದ ಗಲಾಟೆ ಹೆತ್ತ ತಾಯಿಯ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಕಾಜಿರಂಗದಲ್ಲಿ ಪ್ರಾಣಿಗಳ ಮಾರಣಹೋಮ ತಡೆಯಬಲ್ಲದೇ ʻಎಲಿವೇಟೆಡ್ ಕಾರಿಡಾರ್ʼ? 30 ವರ್ಷಗಳ ಹೋರಾಟಕ್ಕೆ ಸಿಗುವುದೇ ಜಯ?
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಶವಾಗಾರಕ್ಕೆ ರವಾನಿಸಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಬೆಂಕಿಗೆ 10 ಲಕ್ಷ ರೂ. ಮೌಲ್ಯದ ಪೈಪ್‌ಗಳು ಸುಟ್ಟು ಭಸ್ಮ

