ವಿಜಯಪುರ: ರಾಜ್ಯದಲ್ಲಿ ನಡೆದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ವಿಜಯಪುರ ನಗರದ ಸೈನಿಕ ಶಾಲೆ ಯಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಇಂದಿನಿಂದಲೇ ಸಕಲ ವ್ಯವಸ್ಥೆ ಮಾಡಿಕೊಂಡಿದೆ.
Advertisement
ಸೈನಿಕ್ ಶಾಲೆಯ ಒಡೆಯರ ಸದನದಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್, ಎಸ್‍ಪಿ ಆನಂದ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಎರಡು ಪ್ರತ್ಯೇಕ ಕೋಣೆಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದ್ದು, 16 ಟೇಬಲ್‍ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ 100 ಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ನಡೆಯಿತು ಉಪಚುನಾವಣೆ – ನ.2ಕ್ಕೆ ಫಲಿತಾಂಶ
Advertisement
Advertisement
ಅಕ್ಟೋಬರ್ 30 ರಂದು ಎರಡು ಕ್ಷೇತ್ರದಲ್ಲಿ ಉಪಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿತ್ತು. ಇದೀಗ ನಾಳೆ ಫಲಿತಾಂಶ ಹೊರಬೀಳಲಿದ್ದು, ಎಲ್ಲರ ಚಿತ್ತ ಉಪಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
Advertisement