ನಾನ್‍ವೆಜ್ ಪ್ರಿಯರು ಪ್ರತಿ ವೀಕೆಂಡ್‍ನಲ್ಲಿ ಮಟನ್ ಮಸಾಲ, ಕಬಾಬ್, ಬಿರಿಯಾನಿ ಎಂದು ರುಚಿಯಾದ ಅಡುಗೆ ಮಾಡುತ್ತಾರೆ. ಆದರೆ ನೀವು ಇಂದು ರುಚಿ ರುಚಿಯಾಗಿ ಹೋಟೆಲ್‍ನಲ್ಲಿ ಮಾಡುವ ಹಾಗೇ ಮಟನ್ ಮಸಾಲೆ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಗಳು:
* ಮೆಂತೆ ಸೊಪ್ಪು
* ಪುದೀನಾ ಸೊಪ್ಪು
* ಶುಂಠಿ, ಬೆಳ್ಳುಳ್ಳಿ
* ಈರುಳ್ಳಿ- 2
* ಅಡುಗೆ ಎಣ್ಣೆ- 1 ಕಪ್
* ಚಕ್ಕೆ, ಲವಂಗ
* ಕರಿ ಮೆಣಸು – 3 ಟೀಸ್ಪೂನ್
* ಗಸಗಸೆ- 2 ಟೀಸ್ಪೂನ್
* ಹಸಿ ಮೆಣಸಿನಕಾಯಿ- 4 ರಿಂದ 5
* ತೆಂಗಿನ ಕಾಯಿ- ಅರ್ಧ ಕಪ್
* ಕೊತ್ತಂಬರಿ ಸೊಪ್ಪು
* ಮಟನ್- 1 ಕೆಜಿ
Advertisement
Advertisement
ಮಾಡುವ ವಿಧಾನ:
* ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಕ್ಕೆ, ಲವಂಗ, ಕರಿ ಮೆಣಸು, ಗಸಗಸೆ ಹಾಕಿ ಹುರಿದುಕೊಳ್ಳಿ.
Advertisement
* ನಂತರ ಇದಕ್ಕೆ ಈರುಳ್ಳಿ ಹಾಕಿ, ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಬೇಕು.
* ಬಳಿಕ ಅದೇ ಬಾಣಲೆಗೆ ಹಸಿ ಮೆಣಸು, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಫ್ರೈ ಮಾಡಿಕೊಳ್ಳಬೇಕು.
* ನಂತರ ಮಿಕ್ಸಿ ಜಾರಿಗೆ ತೆಂಗಿನ ಕಾಯಿ ಹಾಕಿ, ಫ್ರೈ ಮಾಡಿದ ಮಸಲಾ ಹಾಕಿ ರುಬ್ಬಿಕೊಳ್ಳಬೇಕು.
* ಬಳಿಕ ಒಂದು ಕುಕ್ಕರ್‌ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ.
* ಬಳಿಕ ಮಟನ್, ಉಪ್ಪು ಹಾಕಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ, ಬಳಿಕ ರುಬ್ಬಿದ ಮಿಶ್ರಣ ಹಾಕಿ 2 ವಿಜಿಲ್ ಬರಿಸಬೇಕು.
* ಈಗ ರುಚಿಕರವಾದ ಮಟನ್ ಮಸಾಲಾ ಸವಿಯಲು ಸಿದ್ಧವಾಗುತ್ತದೆ.