ಕ್ಯಾರೆಟ್ ಬಳಸಿ ಮಾಡಲಾಗುವ ಎಲ್ಲಾ ರೀತಿಯ ಸಿಹಿಯೂ ಅದ್ಭುತವಾದ ರುಚಿ ನೀಡುತ್ತದೆ. ಕ್ಯಾರೆಟ್ ಜ್ಯೂಸ್, ಕ್ಯಾರೆಟ್ ಹಲ್ವಾ ಹೆಚ್ಚಾಗಿ ನೀವು ಮನೆಯಲ್ಲಿ ಟ್ರೈ ಮಾಡಿ ನೋಡಿರುತ್ತೀರಿ. ಎಂದಾದರೂ ಕ್ಯಾರೆಟ್ ಖೀರ್ (Carrot Kheer) ಮಾಡಿ ನೋಡಿದ್ದೀರಾ? ಇಲ್ಲ ಎಂದರೆ ರುಚಿಕರ ಹಾಗೂ ಸಿಂಪಲ್ ಆದ ಈ ರೆಸಿಪಿಯನ್ನೂ ಒಮ್ಮೆ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಗೋಡಂಬಿ – 10
ಒಣ ದ್ರಾಕ್ಷಿ – 2 ಟೀಸ್ಪೂನ್
ತುರಿದ ಕ್ಯಾರೆಟ್ – ಒಂದೂವರೆ ಕಪ್
ಹಾಲು – 4 ಕಪ್
ಕೇಸರಿ – ಕಾಲು ಟೀಸ್ಪೂನ್
ಸಕ್ಕರೆ – ಕಾಲು ಕಪ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಪಿಸ್ತಾ – 2 ಟೀಸ್ಪೂನ್
ಖೋವಾ ತಯಾರಿಸಲು:
ಬೆಣ್ಣೆ – 1 ಟೀಸ್ಪೂನ್
ಹಾಲು – ಕಾಲು ಕಪ್
ಹಾಲಿನ ಪುಡಿ – ಅರ್ಧ ಕಪ್ ಇದನ್ನೂ ಓದಿ: ರುಚಿಯಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ನೀವೊಮ್ಮೆ ಮಾಡಿ ಸವಿಯಿರಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ.
* ಅದೇ ಕಡಾಯಿಗೆ ತುರಿದ ಕ್ಯಾರೆಟ್ ಹಾಕಿ ಚೆನ್ನಾಗಿ ಹುರಿಯಿರಿ. ಕ್ಯಾರೆಟ್ ಬಣ್ಣ ಬದಲಾಗುವವರೆಗೆ ಹಾಗೂ ಪರಿಮಳ ಬರುವವರೆಗೆ ಫ್ರೈ ಮಾಡಿ.
* ಈಗ ಹಾಲು, ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಹಾಲನ್ನು 10 ನಿಮಿಷ ಕುದಿಸಿ.
* ಈ ನಡುವೆ ನೀವು ಖೋವಾ ತಯಾರಿಸಿ. ಇದಕ್ಕಾಗಿ ಒಂದು ಸಣ್ಣ ಪ್ಯಾನ್ನಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕಾಲು ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
Advertisement
* ಬೆಣ್ಣೆ ಹಾಗೂ ಹಾಲು ಚೆನ್ನಾಗಿ ಮಿಶ್ರಣವಾದ ಬಳಿ ಹಾಲಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆಯಂತಾದ ಬಳಿಕ ಅದನ್ನು ತಣ್ಣಗಾಗಿಸಲು ಬದಿಗಿಡಿ. ಇದೀಗ ಖೋವಾ ತಯಾರಾಗಿದೆ.
* ಈಗ ಖೋವಾವವನ್ನು ಪುಡಿ ಮಾಡಿ, ಹಾಲಿಗೆ (ಖೀರ್) ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಸಕ್ಕರೆ ಸೇರಿಸಿ ನಿಧಾನಕ್ಕೆ ಮಿಶ್ರಣ ಮಾಡಿ.
* ಇದನ್ನು 10 ನಿಮಿಷ ಕುದಿಸಿ, ಬಳಿಕ ಏಲಕ್ಕಿ ಪುಡಿ, ಹುರಿದಿಟ್ಟಿದ್ದ ಗೋಡಂಬಿ ಹಾಗೂ ಒಣ ದ್ರಾಕ್ಷಿ ಸೇರಿಸಿ.
* ಖೀರ್ ಅನ್ನು ತಣ್ಣಗಾಗಲು ಬಿಡಿ. ಬಳಿಕ ಪಿಸ್ತಾ ಸೇರಿಸಿ ರುಚಿಯಾದ ಕ್ಯಾರೆಟ್ ಖೀರ್ ಅನ್ನು ಸವಿಯಿರಿ. ಇದನ್ನೂ ಓದಿ: ಮನೆಯಲ್ಲಿ ಸ್ಟ್ರಾಬೆರಿ ಜಾಮ್ ಮಾಡುವುದು ಹೇಗೆ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k