ಸಿಂಪಲ್ ಸುನಿ ಸ್ಯಾಂಡಲ್‍ವುಡ್ ಅಂಗಳದ ಒನ್ ಆಫ್ ದಿ ಟ್ಯಾಲೆಂಟೆಡ್ ಡೈರೆಕ್ಟರ್. ಸಿಂಪಲ್ ಆಗ್ ಒಂದು ಲವ್ ಸ್ಟೋರಿ ಹೇಳಿ ಪ್ರೇಕ್ಷಕರ ಮನದಲ್ಲಿ ರಾಯಲ್ ಆಗಿ ಕುಳಿತಿರುವ ಇವ್ರು ಕಟೆಂಟ್ ಹಾಗೂ ಪ್ರೆಸೆಂಟೇಶನ್ ಮೂಲಕವೇ ಎಲ್ಲರನ್ನು ಕ್ಲೀನ್ ಬೋಲ್ಡ್ ಮಾಡಿಬಿಡ್ತಾರೆ.
ಸದ್ಯ ಅವತಾರ ಪುರುಷ ಬಿಡುಗಡೆಗೆ ಸಿದ್ಧರಾಗಿರುವ ಇವ್ರು ಹೀರೋ ನೋಡಿ ಅಲ್ಲ ಟ್ಯಾಲೆಂಟ್ ನೋಡಿ ಸಿನಿಮಾ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಅರೆ, ಹೀಗ್ ಯಾಕ್ ಹೇಳಿದ್ರು ಅಂತ ನೀವೇನು ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ. ಗತವೈಭವ ಹೀರೋ ಲಾಂಚ್ ಟೀಸರ್ ನೋಡಿದ್ರೆ ಸಾಕು ಆನ್ಸರ್ ಸಿಕ್ಕಿಬಿಡುತ್ತೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!
ಹೌದು, ಗತವೈಭವ ಸಿಂಪಲ್ ಸುನಿ ಮುಂದಿನ ಸಿನಿಮಾ. ಈ ಸಿನಿಮಾ ಮೂಲಕ ನವ ನಟ ದುಶ್ಯಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಸುನಿ. ಗತವೈಭವ ಚಿತ್ರದ ನಾಯಕನ ಇಂಟ್ರಡಕ್ಷನ್ ಟೀಸರ್ ಇಂದು ಬಿಡುಗಡೆಯಾಗಿದೆ. ಡಿಫ್ರೆಂಟ್ ಅಂಡ್ ಕ್ರಿಯೇಟಿವ್ ಆಗಿ ಮೂಡಿ ಬಂದಿರುವ ಹೀರೋ ಲಾಂಚ್ ಟೀಸರ್ ಸಖತ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ವಾವ್ ಎನ್ನುತ್ತಿದ್ದಾರೆ ನೋಡುಗರು. ಈಗಾಗಲೇ ಬಜಾರ್ ಮೂಲಕ ಧನ್ವೀರ್‍ರನ್ನು ಚಿತ್ರರಂಗಕ್ಕೆ ಲಾಂಚ್ ಮಾಡಿ ಸೈ ಎನಿಸಿಕೊಂಡಿರುವ ಸಿಂಪಲ್ ಸುನಿ ಮತ್ತೊಬ್ಬ ಯುವ ನಟ ದುಶ್ಯಂತ್ ಅವರನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ.
ಗುಬ್ಬಿ ಕ್ಷೇತ್ರದ ಶಾಸಕ ಎಸ್. ಆರ್. ಶ್ರೀನಿವಾಸ್ ಪುತ್ರ ದುಶ್ಯಂತ್. ಈ ಮೂಲಕ ಮತ್ತೊಬ್ಬ ರಾಜಕರಣಿಯ ಪುತ್ರ ಚಂದನವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಟನೆ, ಡಾನ್ಸ್, ಆಕ್ಷನ್ ಹೀಗೆ ಎಲ್ಲದರಲ್ಲೂ ಸರ್ವ ರೀತಿಯಲ್ಲೂ ತಯಾರಿ ಮಾಡಿಕೊಂಡು ಬಂದಿದ್ದಾರೆ ದುಶ್ಯಂತ್. ಸದ್ಯ ಟೀಸರ್ ಮೂಲಕ ಚಮಕ್ ಕೊಟ್ಟಿರುವ ಸಿಂಪಲ್ ಸುನಿ ಅವತಾರ ಪುರುಷ ಬಿಡುಗಡೆ ನಂತರ ಗತವೈಭವನ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಈ ಬಾರಿ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಸಬ್ಜೆಕ್ಟ್ ಹೊತ್ತು ತರ್ತಿರುವ ಸಿಂಪಲ್ ಸುನಿ ಅದಕ್ಕೆ ಬೇಕಾದ ಸಕಲ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್
ಚಿತ್ರವನ್ನು ದೀಪಕ್ ತಿಮ್ಮಪ್ಪ ಹಾಗೂ ಸಿಂಪಲ್ ಸುನಿ ಇಬ್ಬರೂ ಜೊತೆಗೂಡಿ ಸುನಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ರವೀಂದ್ರನಾಥ್ ಟಿ ಸಿನಿಮಾಟೋಗ್ರಫಿ, ಭರತ್ ಬಿ.ಜೆ ಸಂಗೀತ, ಮನು ಶೇಡ್ಗಾರ್ ಸಂಕಲನವಿದೆ. ಸದ್ಯದಲ್ಲೇ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ ಚಿತ್ರತಂಡ. ಇದನ್ನೂ ಓದಿ: ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ