ಚಳಿಗಾಲ ಆರಂಭವಾಗಿದ್ದು, ಬೆಳಗ್ಗೆ ಟೀಗೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ, ಗರಂಗರಂ ಆಗಿ ಏನಾದರೂ ಕೊಡಿ ಎಂದು ಮನೆಯವರು ಮಕ್ಕಳು ದಿನಾ ಕೇಳುತ್ತಿರುತ್ತಾರೆ. ಆದರೆ ಏನು ಮಾಡಿ ಕೊಡುವುದು ಎಂದು ಚಿಂತೆ ಆಗುತ್ತದೆ. ಅದಕ್ಕಾಗಿ ಸಿಂಪಲ್ ಆಗಿ ಈರುಳ್ಳಿ ಪಕೋಡ ಮಾಡುವ ವಿಧಾನ ಇಲ್ಲಿದೆ ನೋಡಿ.
Advertisement
ಬೇಕಾಗುವ ಸಾಮಾಗ್ರಿಗಳು
1. ಈರುಳ್ಳಿ – 2
2. ಕಡಲೆ ಹಿಟ್ಟು – 1 ಕಪ್
3. ಅಕ್ಕಿ ಹಿಟ್ಟು – 1/4 ಕಪ್
4. ಉಪ್ಪು – ರುಚಿಗೆ ತಕ್ಕಷ್ಟು
5. ಖಾರದ ಪುಡಿ – 2 ಚಮಚ
6. ಸೋಂಪು -1 ಚಮಚ
7. ಕರಿಬೇವು
8. ಹಸಿರು ಮೆಣಸಿನಕಾಯಿ
9. ಕೊತ್ತಂಬರಿ ಸೊಪ್ಪು
10. ಶುಂಠಿ
11. ಎಣ್ಣೆ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಬಾಣಲೆಗೆ ಸಣ್ಣೆಗೆ ಉದ್ದುದ್ದ ಹಚ್ಚಿದ್ದ ಈರುಳ್ಳಿ, ಕರಿಬೇವು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಖಾರದ ಪುಡಿ, ಸೋಂಪು (ಜೀರಿಗೆಯನ್ನು ಬಳಸಬಹುದು) ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
* ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಕಿ ಕಲಸಿಕೊಳ್ಳಿ.
* ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಬಿಸಿ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟನ್ನು ತುಂಬಾ ತೆಳುವಾಗಿ ಮಾಡಿಕೊಳ್ಳಬೇಡಿ.
* ನಂತರ ಬೇರೊಂದು ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ ಮಿಕ್ಸ್ ಮಾಡಿದ್ದ ಹಿಟ್ಟನ್ನು ಚಿಕ್ಕ ಚಿಕ್ಕದಾಗಿ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ.
* ನಂತರ ಟೀ, ಕಾಫಿ ಜೊತೆಗೆ ಸವಿಯಿರಿ.