ಗೃಹಿಣಿಯರಿಗೆ ಸಂಜೆಯ ಸ್ನ್ಯಾಕ್ಸ್ ಏನು ವಿಶೇಷವಾಗಿ ಮಾಡೋದು ಎಂಬ ಚಿಂತೆ ಯಾವಾಗಲೂ ಇದ್ದೇ ಇರುತ್ತದೆ. ಅಂತಹವರಿಗಾಗಿ ನಾವಿಂದು ಈರುಳ್ಳಿ ಮೊಟ್ಟೆಯ ಪಕೋಡಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಸಿಂಪಲ್ ಆಗಿರೋ ಈ ರೆಸಿಪಿ ತುಂಬಾ ಟೇಸ್ಟಿಯೂ ಆಗಿದೆ. ಸಾಮಾನ್ಯ ಈರುಳ್ಳಿ ಪಕೋಡಾವನ್ನು ನೀವು ಸವಿದಿರುತ್ತೀರಿ. ಆದ್ರೆ ಇದಕ್ಕೆ ಸ್ವಲ್ಪ ಟ್ವಿಸ್ಟ್ ನೀಡಿ ಮೊಟ್ಟೆಯೂ ಸೇರಿಸಿ ಪಕೋಡಾ ಮಾಡಿಲ್ಲ ಎಂದರೆ ಈ ರೆಸಿಪಿಯನ್ನೊಮ್ಮೆ ಖಂಡಿತಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 2
ಹೆಚ್ಚಿದ ಈರುಳ್ಳಿ – 2
ಕಡಲೆ ಹಿಟ್ಟು – 1 ಕಪ್
ಮೈದಾ ಹಿಟ್ಟು – 2 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ನೀರು – ಅಗತ್ಯವಿರುವಂತೆ
ಎಣ್ಣೆ – ಹುರಿಯಲು ಬೇಕಾಗುವಷ್ಟು
ಅಡುಗೆ ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಉಳಿದ ದೋಸೆ ಹಿಟ್ಟು ಇದ್ದಾಗ ಕೀಮಾ ದೋಸೆ ಖಂಡಿತಾ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಈರುಳ್ಳಿ ಹಾಕಿ, ಕಡಲೆ ಹಿಟ್ಟು, ಮೈದಾ ಹಿಟ್ಟು, ಅರಿಶಿನ ಪುಡಿ, ಕೆಂಪು ಮೆಣಸಿನಪುಡಿ, ಸಾಸಿವೆ, ಜೀರಿಗೆ, ಉಪ್ಪು ಹಾಕಿ ನೀರನ್ನು ಸೇರಿಸಿ ದಪ್ಪಗಿನ ಹಿಟ್ಟಾಗಿ ಮಿಶ್ರಣ ಮಾಡಿಕೊಳ್ಳಿ.
* ಅದಕ್ಕೆ ಹಿಂಗ್ ಸೇರಿಸಿ ಮಿಶ್ರಣ ಮಾಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
* ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳಾಗಿ ಕತ್ತರಿಸಿ, ಒಂದೊಂದೇ ತುಂಡನ್ನು ಈರುಳ್ಳಿ ಮಿಶ್ರಣಕ್ಕೆ ಹಾಕಿಕೊಂಡು ಸುತ್ತಲೂ ಲೇಪಿಸಿಕೊಳ್ಳಿ.
* ಈಗ ಕಾದ ಎಣ್ಣೆಯಲ್ಲಿ ಪಕೋಡಾ ರೀತಿಯಲ್ಲಿ ಅವುಗಳನ್ನು ಬಿಟ್ಟು ಗರಿಗರಿಯಾಗಿ ಹುರಿದುಕೊಳ್ಳಿ.
* ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಈರುಳ್ಳಿ, ಮೊಟ್ಟೆಯ ಪಕೋಡಾ ತಯಾರಾಗಿದ್ದು, ಕೆಚಪ್ ಅಥವಾ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಬಾದಾಮಿ ಗ್ರೇವಿಯ ಚಿಕನ್ – ಯಮ್ಮೀ ಫ್ಲೇವರ್
Advertisement
Web Stories