ಭಾನುವಾರದ ವೀಕೆಂಡ್ ವೇಳೆ ಹೊರಗಡೆ ಹೋಗಿ ಏನಾದರೂ ಬಾಯಿ ಚಪ್ಪರಿಸುವ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ವರುಣನ ಭಯದಿಂದ ಹೊರಗೆ ಹೋಗಲು ಸಾಧ್ಯವಾಗದೇ, ಮನೆಯಲ್ಲಿಯೇ ಏನಾದರೂ ಮಾಡಿ ತಿನ್ನೋಣವೆನ್ನುವ ಆಹಾರ ಪ್ರಿಯರಿಗೆ ಸುಲಭವಾಗಿ ಮಾಡಬಹುದಾದ ಟೊಮೆಟೊ ಚಕ್ಕುಲಿಯ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಟೊಮೆಟೊ – 2
ಹುರಿಗಡಲೆ – 2-3 ದೊಡ್ಡ ಸ್ಪೂನ್
ಅಕ್ಕಿ ಹಿಟ್ಟು – 1/4 ಕೆಜಿ
ಹುರಿಗಡಲೆ ಹಿಟ್ಟು – 100 ಗ್ರಾಂ
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ – 1 ಸ್ಪೂನ್
ಬೆಣ್ಣೆ – 1 1/2 ಸ್ಯೂನ್
ಎಣ್ಣೆ – ಕರಿಯಲು
ಎಳ್ಳು – 1 ಸ್ಪೂನ್
ಜೀರಿಗೆ – 1 ಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹುರಿಗಡಲೆಯನ್ನು ಹುರಿದು, ಚೆನ್ನಾಗಿ ಪುಡಿ ಮಾಡಿಕೊಳ್ಳಿ.
* ಟೊಮೆಟೊವನ್ನು ಮಿಕ್ಸಿ ಜಾರ್‍ಗೆ ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
* ಒಂದು ಬೌಲ್‍ಗೆ ಅಕ್ಕಿ ಹಿಟ್ಟು + ಕಡಲೆ ಹಿಟ್ಟು + ಹುರಿದು ಪುಡಿ ಮಾಡಿದ ಹುರಿಗಡಲೆ ಪುಡಿ 2 ಸ್ಪೂನ್‍ರಷ್ಟು + ಉಪ್ಪು + ಖಾರದ ಪುಡಿ+ ಎಳ್ಳು+ ಜೀರಿಗೆ + ಬೆಣ್ಣೆ ಹಾಕಿ ನೀರು ಬೆರಸದೇ ಹಾಗೇ ಕಲಸಿಕೊಳ್ಳಿ.
* ಕಲಸಿದ ಪುಡಿಗೆ ಸ್ವಲ್ಪ ಸ್ವಲ್ಪ ಟೊಮೆಟೊ ಪೇಸ್ಟ್ ಹಾಕಿಕೊಂಡು ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿರಿ, ಕಲಸಲು ನೀರು ಬಳಸಬೇಡಿ.
* ಈಗ ಚಕ್ಕುಲಿ ಒರಳಿಗೆ ಎಣ್ಣೆ ಸವರಿ ಕಲಸಿದ ಹಿಟ್ಟನ್ನು ಉಂಡೆ ಮಾಡಿ ಹಾಕಿ.
* ಕಾಯುತ್ತಿರುವ ಎಣ್ಣೆಗೆ ನೇರವಾಗಿ ಚಕ್ಕುಲಿ ರೀತಿ ಒರಳಿನ ಸಹಾಯದಿಂದ ಹಾಕಿ ಕರಿಯಿರಿ.
* ಗರಿ ಗರಿಯಾದ ಟೊಮೆಟೊ ಚಕ್ಕುಲಿ ಸವಿಯಲು ಸಿದ್ದ.
* ಬೇಕಾದರೆ ಟೊಮೆಟೊ ಸಾಸ್‍ನೊಂದಿಗೆ ಸವಿಯಿರಿ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv