ರಜಾ ದಿನಗಳಲ್ಲಿ ಮನೆಯಲ್ಲಿ ಏನಾದರೂ ಸ್ಪೆಶಲ್ ಆಗಿ ಮಾಡಿಕೊಂಡು ತಿನ್ನುವ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಎಗ್ ಪ್ರಿಯರಿಗೆಂದೇ ಸಿಂಪಲ್ಲಾಗಿ ಎಗ್ ಮಂಚೂರಿ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.
ಬೇಕಾಗುವ ಸಾಮಗ್ರಿಗಳು:
1. 2 ಬೇಯಿಸಿದ ಮೊಟ್ಟೆ ಹಾಗೂ 1 ಹಸಿ ಮೊಟ್ಟೆ
2. ಈರುಳ್ಳಿ- 1 ಮೀಡಿಯಂ
3. ಟೊಮೆಟೊ- 1 ಮೀಡಿಯಂ
3. ಹಸಿಮೆಣಸಿನಕಾಯಿ- 4
4. ಕೊತ್ತಂಬರಿ ಸೊಪ್ಪು ಸ್ವಲ್ಪ
5. ಶುಂಠಿ ಬೆಳ್ಳುಳಿ ಪೇಸ್ಟ್
6. ಕಾನ್‍ಪ್ಲವರ್ ಹಿಟ್ಟು- 200 ಗ್ರಾಂ
7. ಅಕ್ಕಿ ಹಿಟ್ಟು- 50 ಗ್ರಾಂ
8. ಉಪ್ಪು-ರುಚಿಗೆ ತಕ್ಕಷ್ಟು
9. ಖಾರದ ಪುಡಿ ಹಾಗೂ ಎಗ್ ಮಸಾಲಾ ಪುಡಿ ರುಚಿಗೆ ತಕ್ಕಷ್ಟು
10. ಟೊಮೆಟೊ ಸಾಸ್ ಸ್ವಲ್ಪ
11. ಎಣ್ಣೆ ಕರಿಯಲು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬೇಯಿಸಿಕೊಂಡಿದ್ದ ಮೊಟ್ಟೆಯನ್ನು ಸಣ್ಣಗೆ ಹಚ್ಚಿಕೊಳ್ಳಬೇಕು.
* ಒಂದು ಬಟ್ಟಲಿನಲ್ಲಿ 200 ಗ್ರಾಂ ಕಾನ್‍ಫ್ಲವರ್ ಹಿಟ್ಟು ಹಾಗೂ 100 ಗ್ರಾಂ ಅಕ್ಕಿ ಹಾಕಿ ಹಿಟ್ಟಿನ ಮಿಶ್ರಣ ಸಿದ್ದಪಡಿಸಿಕೊಳ್ಳಿ.
* ಹಿಟ್ಟಿನ ಮಿಶ್ರಣಕ್ಕೆ ಹಸಿಮೊಟ್ಟೆಯ ವೈಟ್ ಭಾಗ ಹಾಗೂ ಸಣ್ಣಗೆ ಹಚ್ಚಿದ ಮೊಟ್ಟೆಯನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಕಲಸಿಕೊಂಡು 10 ನಿಮಿಷ ನೆನೆ ಇಟ್ಟುಕೊಳ್ಳಿ.
* ಕಲಸಿಕೊಂಡ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಗೋಲ್ಡನ್ ಫ್ರೈ ಆಗುವವರೆಗೆ ಕರಿಯಬೇಕು.
* ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹಚ್ಚಿದ ಈರುಳ್ಳಿ, ಮೆಣಸಿಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ.
* ಇದಕ್ಕೆ ಟೊಮೆಟೊ ಹಾಗೂ ರುಚಿಗೆ ಬೇಕಾದಷ್ಟು ಉಪ್ಪು, ಖಾರದ ಪುಡಿ ಹಾಗೂ ಎಗ್ ಮಸಾಲವನ್ನು ಹಾಕಿಕೊಂಡು ಮಿಶ್ರಣವನ್ನು ತಯಾರಿಸಿಕೊಳ್ಳಿ.
* ಕರಿದ ಎಗ್ ಉಂಡೆಗಳನ್ನು ತಯಾರಿಸಿಕೊಂಡ ಮಿಶ್ರಣದಲ್ಲಿ ಹಾಕಿ ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ.
* ನಂತರ ಟೊಮೆಟೊ ಸಾಸ್‍ನೊಂದಿಗೆ ಎಗ್ ಮಂಚೂರಿ ಸವಿಯಿರಿ.
Advertisement