ಮತ್ತೆ ಕರ್ನಾಟಕದಾದ್ಯಂತ ಮಳೆ ಆರಂಭವಾಗಿದೆ. ಮಕ್ಕಳು, ಕೆಲಸಕ್ಕೆ ಹೋಗುವವರು ಬೇಗ ಬೇಗ ಮನೆ ಸೇರಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಇದ್ದರೆ ಏನಾದರೂ ಬಿಸಿಬಿಸಿಯಾಗಿ ಖಾರಖಾರವಾಗಿ ತಿನ್ನೋಣ ಅನ್ನಿಸುತ್ತದೆ. ಹೀಗಾಗಿ ಸಿಂಪಲ್ಲಾಗಿ ಜೋಳದ ಕಾಬಾಬ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಬೇಕಾಗುವ ಸಾಮಾಗ್ರಿಗಳು:
1. ಸ್ವೀಟ್ ಕಾರ್ನ್ – ಅರ್ಧ ಬಟ್ಟಲು
2. ಆಲೂಗಡ್ಡೆ -1 ಸಣ್ಣದು
3. ಈರುಳ್ಳಿ – 1 ಮೀಡಿಯಂ
4. ಕ್ಯಾಪ್ಸಿಕಂ – 1/4 ಬಟ್ಟಲು
5. ಹಸಿಮೆಣಸಿಕಾಯಿ – 5
6. ನಿಂಬೆ ಹಣ್ಣು – ಸಣ್ಣದು
7. ಕೊತ್ತಂಬರಿ ಸೊಪ್ಪು + ಪುದೀನಾ – ಸ್ವಲ್ಪ
9. ಶುಂಠಿ – ಸ್ವಲ್ಪ
10. ಗರಂ ಮಸಾಲ – 1/2 ಚಮಚ
11. ಅಕ್ಕಿ ಹಿಟ್ಟು – 1 ಚಮಚ
12. ಕಡಲೆ ಹಿಟ್ಟು – 1 ಚಮಚ
13. ಬ್ರೆಡ್ – 2 ಸ್ಲೈಸ್
14. ಉಪ್ಪು – ರುಚಿಗೆ ತಕ್ಕಷ್ಟು
15. ಎಣ್ಣೆ – ಕರಿಯಲು
16. ಐಸ್‍ಕ್ರೀಂ ಸ್ಟಿಕ್ – 5-10
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸ್ವೀಟ್ ಕಾರ್ನ್ ಅನ್ನು ನೀರಿನಲ್ಲಿ ಬೇಯಿಸಿ.
* ಬಳಿಕ ನೀರು ಸೋಸಿ ಮಿಕ್ಸರ್ ಜಾರ್ ಗೆ ಹಾಕಿ ಒಂದು ಸುತ್ತು ಗ್ರೈಂಡ್ ಮಾಡಿ
* ತರಿತರಿಯಾಗಿ ರುಬ್ಬಿದ ಸ್ವೀಟ್ ಕಾರ್ನ್ ಅನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿ.
* ಅದಕ್ಕೆ ಬೇಯಿಸಿ ತುರಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಪುದೀನಾ ಹಾಕಿ ಕಲಸಿ.
* ನಂತರ ಅದಕ್ಕೆ ಗರಂ ಮಸಾಲ ಜೊತೆಗೆ ನೀರಿನಲ್ಲಿ ಅದ್ದಿ ಹಿಂಡಿದ ಬ್ರೆಡ್ ಅನ್ನು ಪುಡಿ ಮಾಡಿ ಹಾಕಿ.
* ನಂತರ 1 ಚಮಚ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ.
* ಬಳಿಕ ಬೇಯಿಸಿದ ಸ್ವೀಟ್ ಕಾರ್ನ್ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ.
* ಬಳಿಕ ಎಲ್ಲವೂ ಸರಿಯಾಗಿ ಮಿಕ್ಸ್ ಆಗುವಂತೆ ಕೈಯಲ್ಲಿ ಕಲಸಿಡಿ.
* ಎರಡೂ ಅಂಗೈಗೆ ಎಣ್ಣೆ ಸವರಿಕೊಂಡು ಹಿಟ್ಟು ರೋಲ್ ಮಾಡಿ ಐಸ್‍ಕ್ರೀಂ ಸ್ಟಿಕ್‍ಗೆ ಅಂಟಿಸಿ.
* ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಸವಿಯಿರಿ..
ಗಮನಿಸಿ: (ಹಿಟ್ಟು ಮಿಕ್ಸ್ ಮಾಡಲು ನೀರು ಬಳಸಬೇಡಿ)
Advertisement