ಕರ್ನಾಟಕದಲ್ಲಿ ಈಗಂತೂ ಪ್ರತಿ ಸಂಜೆ ಮಳೆಯಾಗುತ್ತಿದೆ. ಸಂಜೆ ವೇಳೆ ಬಿಸಿಬಿಸಿಯಾಗಿ, ಖಾರ ಖಾರವಾಗಿ ಏನಾದರೂ ತಿನ್ನಬೇಕೆನಿಸುತ್ತದೆ. ಹೊರಗಡೆ ಹೋಗೋಣ ಅಂದರೆ ಮಳೆ. ಹೀಗಾಗಿ ನಿಮಗೆ ಮನೆಯಲ್ಲೇ ಸಿಂಪಲಾಗಿ ಆಲೂಗಡ್ಡೆ ವೆಡ್ಜ್ ಮಾಡೋ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
1. ಆಲೂಗೆಡ್ಡೆ – 2
2. ಉಪ್ಪು – ರುಚಿಗೆ ತಕ್ಕಷ್ಟು
3. ಜೋಳದ ಹಿಟ್ಟು – 2 ಚಮಚ
4. ಖಾರದ ಪುಡಿ – 1/2 ಚಮಚ
5. ಪೆಪ್ಪರ್ ಪೌಡರ್ – 1/2 ಚಮಚ
6. ಎಣ್ಣೆ
Advertisement
Advertisement
ಮಾಡುವ ವಿಧಾನ:
* ಮೊದಲು ಆಲೂಗಡ್ಡೆ ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ.
* ನಂತರ ಒಂದು ಆಲೂಗೆಡ್ಡೆಯನ್ನು ಉದ್ದವಾಗಿ 8 ಪೀಸ್ ಮಾಡಿಕೊಳ್ಳಿ.
* ಕತ್ತರಿಸಿದ ಆಲೂಗಡ್ಡೆ, 1/2 ಚಮಚ ಉಪ್ಪು , ನೀರು ಹಾಕಿ 3 ನಿಮಿಷ ಬೇಯಿಸಿಕೊಳ್ಳಿ.
* ನಂತರ ಬೇಯಿಸಿದ ಆಲೂಗಡ್ಡೆಗೆ 2 ಚಮಚ ಎಣ್ಣೆ, 2 ಚಮಚ ಜೋಳದ ಹಿಟ್ಟು, 1/2 ಚಮಚ ಖಾರದ ಪುಡಿ, 1/2 ಚಮಚ ಪೆಪ್ಪರ್ ಪೌಡರ್, 1/2 ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಅದನ್ನು ಪ್ಲೇಟ್ ಗೆ ಹಾಕಿ ಓವೆನ್ ಬೇಕ್ ನಲ್ಲಿ ಸ್ವಲ್ಪ ಡ್ರೈ ಆಗಲು ಬಿಡಿ.
* ಬಳಿಕ ಬೇರೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
* ಕಾದ ಎಣ್ಣೆಗೆ ಡ್ರೈ ಆಗಿದ್ದ ಆಲೂಗಡ್ಡೆ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ.
* ನಂತರ ಬೇರೆ ಪ್ಲೇಟ್ ಗೆ ಹಾಕಿ ಅದರ ಮೇಲೆ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ, ಸಾಸ್ ಜೊತೆ ಸವಿಯಿರಿ.
Advertisement