ಈಗಂತೂ ತುಂಬಾ ಚಳಿ ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುತ್ತದೆ. ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಲು ಇಲ್ಲಿದೆ ಸುಲಭ ವಿಧಾನ.
ಬೇಕಾಗುವ ಸಾಮಾಗ್ರಿಗಳು
1. ಕಡ್ಲೆಹಿಟ್ಟು – ಒಂದೂವರೆ ಕಪ್
2. ಅಕ್ಕಿಹಿಟ್ಟು – 1 ಕಪ್
3. ಖಾರದ ಪುಡಿ – 2 ಚಮಚ
4. ಉಪ್ಪು – ರುಚಿಗೆ ತಕ್ಕಷ್ಟು
5 ಕೊತ್ತಂಬರಿ ಸೊಪ್ಪು- ಸ್ವಲ್ಪ
6. ಎಳ್ಳು – 2 ಚಮಚ
7. ಎಣ್ಣೆ- ಕರಿಯಲು
8. ಬ್ರೆಡ್ ಸ್ಲೈಸ್ – 6
Advertisement
Advertisement
ಮಾಡುವ ವಿಧಾನ
* ಒಂದು ಬೌಲ್‍ಗೆ ಜರಡಿ ಹಿಡಿದ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
* ಹಿಟ್ಟು ತೀರಾ ತೆಳುವಾಗಿರಬಾರದು, ಸ್ವಲ್ಪ ಗಟ್ಟಿಯಾಗಿರುವಂತೆ ಕಲಸಿ.
* ನಂತರ ಬ್ರೆಡ್ ಸ್ಲೈಸ್‍ನ 2 ಭಾಗಕ್ಕೆ ಕಲಸಿದ ಹಿಟ್ಟನ್ನು ಸ್ವಲ್ಪ ಹಾಕಿ.
* ನಂತರ ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
* ಸಾಸ್ ಅಥವಾ ಕೆಚಪ್ ಜೊತೆ ಸವಿಯಿರಿ.
* ಬೇಕಿದ್ದರೆ ಕಲಸಿದ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆ ಮ್ಯಾಶ್ ಮಾಡಿ ಮಿಕ್ಸ್ ಮಾಡಿಕೊಳ್ಳಬಹುದು. ಜೊತೆಗೆ ತುರಿದ ಕ್ಯಾರೆಟ್, ಬೇಯಿಸಿದ ಬಟಾಣಿ,ಸಣ್ಣಗೆ ಹೆಚ್ಚಿದ ಎಲೆಕೋಸು, ಕ್ಯಾಪ್ಸಿಕಮ್ ಇತರೆ ತರಕಾರಿಗಳನ್ನು ಮಿಕ್ಸ್ ಮಾಡಿಕೊಳ್ಳಬಹುದು.