ನಾವಿಂದು ನಿಮಗೆ ತುಂಬ ಸುಲಭವಾಗಿ ನಿಂಬೆಹಣ್ಣಿನ ರಸಂ (Lemon Rasam) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಹೆಚ್ಚಿನ ತರಕಾರಿ ಇಲ್ಲದಿರುವಾಗ ಇದನ್ನು ನೀವು ಖಂಡಿತವಾಗಿಯೂ ಟ್ರೈ ಮಾಡಿ. ಅನಾರೋಗ್ಯ ಎನಿಸಿದ ಸಂದರ್ಭ, ನಾಲಿಗೆಗೆ ರುಚಿ ಹತ್ತುತ್ತಿಲ್ಲ ಎನಿಸಿದಾಗ ಇದರ ರುಚಿ ಒಮ್ಮೆ ನೀವು ನೋಡಲೇಬೇಕು. ಇದನ್ನು ಸೇವಿಸಿದ ಬಳಿಕ ಒಂದು ರೀತಿಯ ಉಲ್ಲಾಸದಾಯಕ ಅನುಭವವನ್ನು ನೀವು ಖಡಿತಾ ಪಡೆಯುತ್ತೀರಿ.
Advertisement
ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ – 1 ಕಪ್
ಹೆಚ್ಚಿದ ಟೊಮೆಟೊ – 1
ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
ಸೀಳಿದ ಹಸಿರು ಮೆಣಸಿನಕಾಯಿ – 3-4
ಕರಿಬೇವಿನ ಎಲೆ – ಕೆಲವು
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ನಿಂಬೆಹಣ್ಣು – 1
ಒಗ್ಗರಣೆಗೆ:
ತುಪ್ಪ – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಮುರಿದ ಒಣ ಕೆಂಪು ಮೆಣಸಿನಕಾಯಿ – 1
ಹಿಂಗ್ – ಚಿಟಿಕೆ ಇದನ್ನೂ ಓದಿ: ಸೂಪರ್ ಟೇಸ್ಟಿ ಮೇಥಿ ಮಟರ್ ಮಲೈ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್ಗೆ ಹೆಸರು ಬೇಳೆಯನ್ನು ಹಾಕಿ, ಚಿಟಿಕೆ ಅರಿಶಿನ ಸೇರಿಸಿ, 2 ಕಪ್ ನೀರಿನೊಂದಿಗೆ 3-4 ಸೀಟಿಗಳಿಗೆ ಚೆನ್ನಾಗಿ ಬೇಯಿಸಿಕೊಳ್ಳಿ.
* ಒಂದು ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ ಟೊಮೆಟೊ, ಶುಂಠಿ, ಮೆಣಸಿನಕಾಯಿ ಹಾಗೂ ಅರಿಶಿನ ಹಾಕಿ ಫ್ರೈ ಮಾಡಿಕೊಳ್ಳಿ.
* ಈಗ 3 ಕಪ್ ನೀರು ಸೇರಿಸಿ, 10 ನಿಮಿಷ ಚೆನ್ನಾಗಿ ಕುದಿಸಿ.
* ಬಳಿಕ ಬೇಯಿಸಿಟ್ಟುಕೊಂಡಿದ್ದ ಹೆಸರು ಬೇಳೆಯನ್ನು ಕುದಿಯುತ್ತಿರುವ ರಸಂಗೆ ಹಾಕಿ.
* ಉಪ್ಪು, ಕರಿಬೇವಿನ ಸೊಪ್ಪು ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
* ಅಗತ್ಯವಿದ್ದರೆ ಇನ್ನಷ್ಟು ನೀರನ್ನು ಸೇರಿಸಿ ಸ್ಥಿರತೆಯನ್ನು ಹೊಂದಿಸಿ.
Advertisement
* 3-4 ನಿಮಿಷಗಳ ವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ, ಬಳಿಕ ಉರಿಯನ್ನು ಆಫ್ ಮಾಡಿ.
* ಉರಿಯನ್ನು ಆಫ್ ಮಾಡಿದ ಬಳಿಕ ರಸಂಗೆ ನಿಂಬೆ ರಸವನ್ನು ಹಿಂಡಿ. (ಉರಿ ಆಫ್ ಮಾಡದೇ ನಿಂಬೆ ರಸ ಸೇರಿಸಿದರೆ ಕಹಿಯಾಗುವ ಸಾಧ್ಯತೆಯಿರುತ್ತದೆ.)
* ಈ ನಡುವೆ ಒಗ್ಗರಣೆಯನ್ನು ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಚಿಕ್ಕ ಪ್ಯಾನ್ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ.
* ಸಾಸಿವೆ ಸಿಡಿದ ಬಳಿಕ ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಹಿಂಗ್ ಸೇರಿಸಿ.
* ತಕ್ಷಣ ಒಗ್ಗರಣೆಯನ್ನು ರಸಂಗೆ ಹಾಕಿ ಮಿಶ್ರಣ ಮಾಡಿ.
* ಇದೀಗ ನಿಂಬೆಹಣ್ಣಿನ ರಸಂ ತಯಾರಾಗಿದ್ದು, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಸ್ವಲ್ಪ ತುಪ್ಪ ಹಾಗೂ ಹಪ್ಪಳ ಜೊತೆಯಲ್ಲಿದ್ದರೆ ಸಿಂಪಲ್ ಆದರೂ ಸಖತ್ ಟೇಸ್ಟ್ ಎನಿಸುತ್ತದೆ. ಇದನ್ನೂ ಓದಿ: ಒಮ್ಮೆ ಮಾಡಿ ನೋಡಲೇಬೇಕು ಬೆಂಡೆಕಾಯಿ ಸಾಸಿವೆ