ಉಡುಪಿ: ಜಲಪ್ರಳಯವಾಗಿರುವ ಕೊಡಗು ಸಂಕಷ್ಟದಲ್ಲಿ ಇರುವಾಗ ನಾವು ವಿಜ್ರಂಭಣೆಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಸರಿಯಲ್ಲ. ಈ ಬಾರಿ ಸರಳವಾಗಿ, ಭಕ್ತಿಯಿಂದ ಅಷ್ಟಮಿ ಆಚರಿಸೋಣ ಅಂತ ಉಡುಪಿಯ ಕೃಷ್ಣ ಮಠದ ಪರ್ಯಾಯ ಪಲಿಮಾರು ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದಲ್ಲಿ ಅಷ್ಟಮಿ ಸಂದೇಶ ನೀಡಿದ ವಿದ್ಯಾಧೀಶ ಸ್ವಾಮೀಜಿ ನಾವು ಕೊಡಗಿಗಾಗಿ ಭಕ್ತಿಯ ಪ್ರಾರ್ಥನೆ ಮಾಡುತ್ತೇವೆ. ನಷ್ಟವನ್ನೆಲ್ಲ ತುಂಬಿಸು ದೇವಾ ಅಂತ ಪೂಜೆ ಸಲ್ಲಿಸುತ್ತೇವೆ. ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಬಾರಿ ಸರಳವಾಗಿ ಅಷ್ಟಮಿ ಆಚರಿಸುತ್ತೇವೆ ಎಂದು ಹೇಳಿದರು.
Advertisement
Advertisement
ನೆರೆ, ಭೂ ಕುಸಿತದಿಂದಾಗಿ ತೊಂದರೆಗೀಡಾದವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. ಮಡಿಕೇರಿಯಲ್ಲಿ ಜನ ಬಹಳ ಸಂಕಷ್ಟದಲ್ಲಿದ್ದಾರೆ. ನಿರಾಶ್ರಿತರಿಗೆ ಕೃಷ್ಣ ಪ್ರಸಾದ ಕಳುಹಿಸಿ ಕೊಡಲಾಗುವುದು. ಕೃಷ್ಣ ಪ್ರಸಾದದ ರೂಪದಲ್ಲಿ ಉಂಡೆ, ಚಕ್ಕುಲಿ, ಹೊಸ ಬಟ್ಟೆ ತಲುಪಿಸುತ್ತೇವೆ ಅಂತ ತಿಳಿಸಿದ್ರು.
Advertisement
ಕಷ್ಟ ಬಂದಲ್ಲಿ ಶ್ರೀ ಕೃಷ್ಣ ಇರುತ್ತಾನಂತೆ. ಪ್ರಕೃತಿ ವಿಕೋಪ ಆದಾಗಲೂ ಕೃಷ್ಣ ರಕ್ಷಣೆ ನೀಡಿದ್ದಾನೆ. ನಮ್ಮ ಕೊಡಗು ಜಿಲ್ಲೆಗೆ ನೋವಾಗಿದೆ. ಹಾನಿಗೊಳಗಾಗಿದೆ. ಅಲ್ಲಿನ ಜನ ಶೀಘ್ರ ಪುನರ್ ಶಕ್ತಿ ಪಡೆದುಕೊಳ್ಳುತ್ತಾರೆ ಅಂದ್ರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv