ವಿಶೇಷ ದಿನಗಳು ಬಂದರೆ ಸಾಕು ಹಬ್ಬದ ಸಂಕೇತವಾಗಿ ಸಿಹಿ ಮಾಡುತ್ತೇವೆ. ಅದೇ ರೀತಿ ಕ್ರಿಸ್‍ಮಸ್ ಹಬ್ಬ ಬಂದರೆ ವಿವಿಧ ಕೇಕ್ ಗಳನ್ನು ಮಾಡಲಾಗುತ್ತದೆ. ಹಬ್ಬದಲ್ಲೂ ಅಂಗಡಿಯಿಂದ ತಂದು ಮಾಡುವ ಬದಲು ಮನೆಯಲ್ಲಿಯೇ ಕೇಕ್ ಮಾಡೋಣ ಅಂದುಕೊಂಡಿರುತ್ತೀರಾ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ ಕೇಕ್ ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಾಗ್ರಿಗಳು
1. ಮೈದಾ – 200 ಗ್ರಾಂ
2. ಸಕ್ಕರೆ – 200 ಗ್ರಾಂ
3. ಮೊಟ್ಟೆ – 3
4. ಎಣ್ಣೆ – 100 ಗ್ರಾಂ
5. ಬೇಕಿಂಗ್ ಪೌಡರ್
6. ವೆನಿಲಾ ಎಸೆಲ್ಸ್ – 3-4 ಹನಿ
7. ಟೂಟಿ ಫ್ರೂಟಿ – ಅರ್ಧ ಕಪ್
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿ ಜಾರಿಗೆ ಸಕ್ಕರೆ ಹಾಕಿ ಅದನ್ನು ಪೌಡರ್ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಮೈದಾ, ಮೊಟ್ಟೆ ಒಡೆದು ಹಾಕಿ, ಎಣ್ಣೆ, ಬೇಕಿಂಗ್, ಸೋಡ, ವೆನಿಲಾ ಎಸೆನ್ಸ್ ಸೇರಿಸಿ ಎಲ್ಲಾ ಮಿಕ್ಸ್ ಆಗುವಂತೆ ಗ್ರೈಂಡ್ ಮಾಡಿ. (ಸೂಚನೆ: ಯಾವುದೇ ಕಾರಣಕ್ಕೂ ನೀರು ಬಳಸಬಾರದು. ಬ್ಲೆಂಡರ್ ಇದ್ದರೆ ಅಗಲವಾದ ಬೌಲ್‍ಗೆ ಹಾಕಿ ಬೀಟ್ ಮಾಡಬಹುದು)
* ಈಗ ಒಂದು ಅಗಲವಾದ ಕೇಕ್ ಪ್ಯಾನ್ ಅಥವಾ ಅಗಲವಾದ ಪಾತ್ರೆಗೆ ಎಣ್ಣೆ ಸವರಿ. ಗ್ರೈಂಡ್ ಮಾಡಿದ ಬ್ಯಾಟರ್ ಅನ್ನು ಸಮಪ್ರಮಾಣದಲ್ಲಿ ಹಾಕಿ. ಮೇಲೆ ಟೂಟಿ ಫ್ರೂಟಿ ಸೇರಿಸಿ.
* ಬಳಿಕ ಒಮ್ಮೆ ಪ್ಯಾನ್ ಅನ್ನು ಶೇಕ್ ಮಾಡಿ. ಇದರಿಂದ ಬ್ಯಾಟರ್ ಪಾತ್ರೆಯಲ್ಲಿ ಸಮವಾಗಿ ಸೆಟಲ್ ಆಗುತ್ತೆ.
* ಒಂದು ಅಗಲವಾದ ಕುಕ್ಕರ್ ಪ್ಯಾನ್‍ಗೆ 4-5 ಹಿಡಿಯಷ್ಟು ಪುಡಿ ಉಪ್ಪನ್ನು ಹಾಕಿ. 5 ನಿಮಿಷ ಬಿಸಿ ಮಾಡಿ.
* ಬಳಿಕ ಉಪ್ಪಿನ ಮೇಲೆ ಬ್ಯಾಟರ್ ಹಾಕಿದ ಪ್ಯಾನ್ ಇಟ್ಟು. ಕುಕ್ಕರ್ ಮುಚ್ಚಳ ಮುಚ್ಚಿ. (ಉಪ್ಪಿನ ಬದಲಿಗೆ ಮರಳು, ಕುಕ್ಕರ್ ಒಳಗೆ ಇಡುವ ಸ್ಟ್ಯಾಂಡ್ ಬಳಸಬಹುದು)
* 10-15 ನಿಮಿಷದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಪ್ಯಾನ್‍ನಿಂದ ಕೇಕ್ ತೆಗೆದು ಕಟ್ ಮಾಡಿ ಸೇವಿಸಿ. ಎಂಜಾಯ್ ಮಾಡಿ. ( ಸೂಚನೆ: ಕುಕ್ಕರ್ ಗೆ ವಿಷಲ್ ಅಥವಾ ವೈಟ್ ಹಾಕಬಾರದು. ಹಾಕಿದರೆ ಕುಕ್ಕರ್ ಸಿಡಿಯುವ ಸಾಧ್ಯತೆ ಇರುತ್ತದೆ).
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv