ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ತ್ವರಿತವಾಗಿ ಏನಾದರೂ ಸಿಹಿ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವ ಬ್ರೆಡ್ ಹಲ್ವಾ (Bread Halwa) ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಉಳಿದ ಬ್ರೆಡ್ ಸ್ಲೈಸ್ ಬಳಸಿ, ಸಿಂಪಲ್ ಆಗಿ ಮಾಡಬಹುದಾದ ಈ ಸಿಹಿಯನ್ನು ನಿಮ್ಮ ಕ್ವಿಕ್ ರೆಸಿಪಿ ಲಿಸ್ಟ್‌ಗೆ ಖಂಡಿತವಾಗಿಯೂ ಸೇರಿಸಿಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಬ್ರೆಡ್ ಸ್ಲೈಸ್ – 5
ತುಪ್ಪ – 4 ಟೀಸ್ಪೂನ್
ಬಿಸಿ ಹಾಲು – 1 ಕಪ್
ಸಕ್ಕರೆ – ಮುಕ್ಕಾಲು ಕಪ್
ಕೇಸರಿ ಎಳೆಗಳು – ಅರ್ಧ ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಒಣ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ) – ಕೆಲವು ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕೇಸರಿ ಎಳೆಗಗಳನ್ನು 2-3 ಟೀಸ್ಪೂನ್ ಬಿಸಿ ಹಾಲಿನಲ್ಲಿ ನೆನೆಸಿ ಪಕ್ಕಕ್ಕಿಡಿ.
* ಮಿಕ್ಸರ್ ಜಾರ್‌ಗೆ ಬ್ರೆಡ್‌ಗಳನ್ನು ಹಾಕಿ, ಕ್ರಂಬ್ಸ್ ತಯಾರಿಸಿ.
* ಈಗ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದರಲ್ಲಿ ಒಣ ಹಣ್ಣುಗಳನ್ನು ಹಾಕಿ, ಹುರಿದುಕೊಳ್ಳಿ. ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ತುಪ್ಪದಿಂದ ತೆಗೆದು ಪಕ್ಕಕ್ಕಿಡಿ.
* ಈಗ ಅದೇ ಕಡಾಯಿಗೆ 2 ಟೀಸ್ಪೂನ್ ತುಪ್ಪ ಹಾಕಿ, ಬ್ರೆಡ್ ಕ್ರಂಬ್ಸ್ ಸೇರಿಸಿ 5-6 ನಿಮಿಷ ಹುರಿಯಿರಿ.
* ಬ್ರೆಡ್ ಕ್ರಂಬ್ಸ್ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದಕ್ಕೆ 1 ಕಪ್ ಬಿಸಿ ಹಾಲನ್ನು ಹಾಕಿ, ಗಂಟಿಲ್ಲದಂತೆ ಮಿಶ್ರಣ ಮಾಡಿ.
* ಬ್ರೆಡ್ ಕ್ರಂಬ್ಸ್ ಹಾಲನ್ನು ಸಂಪೂರ್ಣವಾಗಿ ಹೀರಿಕೊಂಡ ಬಳಿಕ ಸಕ್ಕರೆಯನ್ನು ಸೇರಿಸಿ, ಮಿಶ್ರಣ ಮಾಡಿ.
* ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಹುರಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ಹಾಗೂ ನೆನೆಸಿಟ್ಟ ಕೇಸರಿಯನ್ನು ಸೇರಿಸಿ, ಮಿಶ್ರಣ ಮಾಡಿ.
* ಈಗ ಉಳಿದ ತುಪ್ಪವನ್ನು ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ತುಪ್ಪ ಹಲ್ವಾದಿಂದ ಬೇರ್ಪಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ.
* ಇದೀಗ ಬ್ರೆಡ್ ಹಲ್ವಾ ತಯಾರಾಗಿದ್ದು, ಬಿಸಿಬಿಸಿಯಾಗಿ ಅಥವಾ ತಣ್ಣಗಾದ ಬಳಿಕ ಅತಿಥಿಗಳಿಗೆ ಸವಿಯಲು ನೀಡಿ. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?