ನವದೆಹಲಿ: ರೌಡಿಶೀಟರ್‌ಗಳ(Gangsters) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಉತ್ತರ ಭಾರತದಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.
ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಿವಿಧ ರೌಡಿಶೀಟರ್‌ಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಗಳ ಸಮನ್ವಯದಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.
ರೌಡಿಶೀಟರ್‌ಗಳು ಮತ್ತು ಭಯೋತ್ಪಾದಕರ(Terrorist) ನಡುವೆ ಸಂಬಂಧಗಳಿರುವುದನ್ನು ಬಹಿರಂಗಪಡಿಸಲಾಗಿದೆ. ಭಾರತ ಮತ್ತು ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಸ್ಟರ್ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳಿಂದಲೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Sidhu Moosewala) ಹತ್ಯೆಯ ಪ್ರಮುಖ ಶಂಕಿತ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಕೆಲವು ಆರೋಪಿಗಳು ಜೈಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಬಳಿಕ ಭಯೋತ್ಪಾದಕರು ಮತ್ತು ರೌಟಿಶೀಟರ್‌ಗಳ ನಡುವೆ ನಂಟು ಬೆಳೆಯುತ್ತಿರುವುದು ಬಹಿರಂಗವಾಗಿದೆ. ಕೇಂದ್ರ ಈ ಬಗ್ಗೆ 2 ತಿಂಗಳಿನಿAದ ಪಂಜಾಬ್ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್
ಕೇಂದ್ರ ಗೃಹ ಸಚಿವಾಲಯ ಭಾರತದಾದ್ಯಂತ ಈ ರೌಡಿಶೀಟರ್‌ಗಳ ವಿರುದ್ಧ ಗುಪ್ತಚರ ನೇತೃತ್ವದ ಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಅವರ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಎನ್‌ಐಎ ಗೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಜೂನ್ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದ ಬಳಿ ಸಿಧು ಮೂಸೆ ವಾಲಾ ಅವರನ್ನು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್