ಬಾಲಿವುಡ್‌ನ ಸ್ಟಾರ್ ಕಪಲ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಾಂಪತ್ಯ ಕಾಲಿಟ್ಟಿದ್ದಾರೆ. ಬಾಂದ್ರಾದ ರಣಬೀರ್ ಕಪೂರ್ ನಿವಾಸದಲ್ಲಿ ಮದುವೆಯಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಐದು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ನವ ಜೋಡಿಗೆ ಆಲಿಯಾ ಭಟ್ ಮಾಜಿ ಪ್ರಿಯಕರ ಸಿದ್ಧಾರ್ಥ್ ಮಲ್ಹೋತ್ರಾ ಶುಭ ಹಾರೈಸಿದ್ದಾರೆ.
- Advertisement 2-
ಕೆಲ ದಿನಗಳಿಂದ ಮದುವೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಈ ಜೋಡಿ, ಮದುವೆಯ ವಿಷ್ಯವನ್ನು ಗೌಪ್ಯವಾಗಿಟ್ಟಿದ್ದರು. ಎಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ರಣಬೀರ್ ಆಲಿಯಾ ಹಸೆಮಣೆ ಎರಿದ್ದಾರೆ. ಬಳಿಕ ತಮ್ಮ ಮದುವೆ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದರ ಮೂಲಕ ಆಲಿಯಾ ಭಟ್ ಅಧಿಕೃತವಾಗಿ ತಿಳಿಸಿದ್ದಾರೆ.
- Advertisement 3-
- Advertisement 4-
ನಟಿ ಆಲಿಯಾ ಭಟ್ ವಿವಾಹದ 8 ಫೋಟೋಗಳನ್ನು ಶೇರ್ ಮಾಡಿ, ಕುಟುಂಬಸ್ಥರು, ಹಿರಿಯರ ಸಮ್ಮುಖದಲ್ಲಿ ನಮ್ಮದೇ ಮನೆಯಲ್ಲಿ, ನೆಚ್ಚಿನ ಸ್ಥಳದಲ್ಲಿ, ನಮ್ಮ ಸಂಬಂಧವನ್ನು 5 ವರ್ಷ ಕಳೆದ ಬಾಲ್ಕನಿಯಲ್ಲಿ ನಾವು ಮದುವೆ ಆದೆವು ಎಂದು ಬರೆದು ಶೇರ್ ಮಾಡಿದ್ರು. ಇದೀಗ ಈ ಪೋಸ್ಟ್ಗೆ ಆಲಿಯಾ ಅವರ ಮಾಜಿ ಪ್ರಿಯಕರ ಸಿದ್ಧಾರ್ಥ್ ಮಲ್ಹೋತ್ರಾ ಶುಭ ಹಾರೈಸಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್
ಈ ಹಿಂದೆ `ಸ್ಟುಡೆಂಟ್ ಆಫ್ ದಿ ಇಯರ್’, `ಕಪೂರ್ ಆಂಡ್ ಸನ್ಸ್’ ಚಿತ್ರದಲ್ಲಿ ಆಲಿಯಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದರು. ಈ ವೇಳೆಯಲ್ಲಿ ಪ್ರೇಮಾಂಕುರವಾಗಿತ್ತು. ಆಲಿಯಾ ಸಿದ್ಧಾರ್ಥ್ ಬ್ರೇಕಪ್ ನಂತರ ರಣಬೀರ್ ಜೊತೆಗೆ 5 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ನವ ಜೋಡಿಗೆ ʻಇಬ್ಬರಿಗೂ ಅಭಿನಂದನೆಗಳು, ಬಹಳಷ್ಟು ಪ್ರೀತಿ ಸಂತೋಷದಿಂದ ಬಾಳಿʼ ಎಂದು ಸಿದ್ಧಾರ್ಥ್ ಮಲ್ಹೋತ್ರಾ ಹಾರೈಸಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.