ಬೆಂಗಳೂರು: ಜಿಮ್ (Gym) ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ (Protein Powder) ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೊಟೀನ್ ಪೌಡರ್ ಸೈಡ್ ಎಫೆಕ್ಟ್ ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ರಿಪೋಟ್ ಔಟ್ ಆಗಲಿದೆ.
Advertisement
ಜಿಮ್‍ಗಳಲ್ಲಿ ಬಾಡಿ ಬಿಲ್ಡ್ ಗಾಗಿ ನೀಡುವ ಪ್ರೊಟೀನ್ ಪೌಡರ್ ಗಳು ಕಿಡ್ನಿ, ಲಿವರ್ ಸೇರಿದಂತೆ ದೇಹದಲ್ಲಿ ಅಡ್ಡ ಪರಿಣಾಮ ಉಂಟುಮಾಡುವ ಬಗ್ಗೆ ಅಂದು ಸದನದ ಶೂನ್ಯವೇಳೆಯಲ್ಲಿ ಸತೀಶ್ ರೆಡ್ಡಿ (Sathish Reddy) ಪ್ರಸ್ತಾಪಿಸಿದ್ರು. ಇದರ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಆರೋಗ್ಯ ಇಲಾಖೆ (Health Department) ನೀಡಿತ್ತು. ಈಗಾಗಲೇ ಆಹಾರ ಸುರಕ್ಷತೆ ಅಧಿಕಾರಿಗಳು ಬೆಂಗಳೂರು ಜಿಮ್‍ಗೆ ತೆರಳಿ ಅಲ್ಲಿ ಬಳಕೆ ಮಾಡುವ ಪ್ರೊಟೀನ್ ಪೌಡರ್ ಸ್ಯಾಂಪಲ್ಸ್ ಸಂಗ್ರಹಿಸಿ ಸೆಂಟ್ರಲ್ ಲ್ಯಾಬ್‍ಗೆ ರವಾನಿಸಲಾಗಿದೆ. ಇನ್ನೊಂದು ವಾರದಲ್ಲಿ ರಿಪೋರ್ಟ್ ಕೂಡ ಬರಬಹುದು ಅಂತಾ ಆರೋಗ್ಯ ಸಚಿವರು ಹೇಳಿದ್ದಾರೆ.
Advertisement
Advertisement
ಪ್ರೊಟೀನ್ ಪೌಡರ್ ನಲ್ಲಿ ದೇಹಕ್ಕೆ ಮಾರಕವಾಗುವ ಕೆಮಿಕಲ್ (chemical) ಬಳಕೆ ಮಾಡಿದ್ರೆ ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದುಕೊಳ್ಳದೇ ಇದ್ರೆ ಅಂತಹ ಜಿಮ್‍ಗಳ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ. ಅನುಮತಿ ರಹಿತ ಕೆಮಿಕಲ್ ಪ್ರೊಟೀನ್ ಪೌಡರ್ ಬಳಕೆ ಮಾಡುವ ಜಿಮ್‍ಗಳನ್ನು ಅನಧಿಕೃತ ಜಿಮ್ ಅಂತಾನೇ ಘೋಷಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವಂತೆ ಮುತಾಲಿಕ್‍ಗೆ ಮನವಿ: ಉಡುಪಿಯಲ್ಲಿ ಕಾದಿದ್ಯಾ ಗುರು-ಶಿಷ್ಯನ ಹಣಾಹಣಿ?
Advertisement
ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ (Heart Attack) ದ ಬಗ್ಗೆಯೂ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಜಿಮ್‍ಗೆ ಹೋಗೋದು ವ್ಯಾಯಾಮ ಮಾಡೋದು ದೇಹಕ್ಕೆ ಒಳ್ಳೆಯದು. ಆದರೆ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಪ್ರೊಟೀನ್ ಪೌಡರ್‍ಗಳ ಬಳಕೆ ಮಾತ್ರ ತೀರಾ ಡೇಂಜರ್, ಇದಕ್ಕೆ ಆರೋಗ್ಯ ಇಲಾಖೆ ಮೂಗುದಾರ ಹಾಕುತ್ತಾ ಅಂತಾ ಕಾದು ನೋಡಬೇಕಿದೆ.