ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಶ್ರೀಗಳ ಭೇಟಿಗಾಗಿ ಗಣ್ಯಾತೀಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಮಠಾಧೀಶರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನು ಭಕ್ತಸಾಗರವೂ ಸಹಸ್ರಾರೂ ಸಂಖ್ಯೆಯಲ್ಲಿ ಹರಿದುಬರುತ್ತಿದೆ.
ವಿಜಯಪುರ (Vijayapura) ದ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಪಲ್ಸ್, ಬಿಪಿ ಸರಿಯಾಗಿದೆ. ಯಾವುದೇ ಆತಂಕ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳಿಗೆ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ.
ಶ್ರೀಗಳ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಸ್ವಾಮೀಜಿ ದರ್ಶನಕ್ಕಾಗಿ ಭಕ್ತಗಣ ಕಾಯ್ದುಕುಳಿತಿದ್ರು. ಜ್ಞಾನಯೋಗಿ ಆಶ್ರಮದ ಆವರಣದಲ್ಲಿ ಭಕ್ತರ ಸಾಗರವೇ ಸೇರಿತ್ತು. ದೇವರ ದರ್ಶನ ಆಗಬೇಕು, ಮತ್ತೆ ಅವರು ಪ್ರವಚನ ಹೇಳಬೇಕು ಅಂತ ಭಕ್ತರು ಕಣ್ಣೀರಿಟ್ಟರು.
ಹೀಗಾಗಿ ಜ್ಞಾನಯೋಗಾಶ್ರಮ ಆವರಣದಲ್ಲಿ ಎಲ್‍ಇಡಿ (LED) ಮೂಲಕ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಸಿದ್ದೇಶ್ವರ ಶ್ರೀಗಳು ದರ್ಶನ ನೀಡಿದ್ರು. ಶ್ರೀಗಳ ದರ್ಶನವಾಗುತ್ತಿದ್ದಂತೆ ಭಾವುಕರಾದ ಭಕ್ತರು ಸಾಷ್ಟಾಂಗ ನಮಸ್ಕಾರ ಹಾಕಿ ನಮನ ಸಲ್ಲಿಸಿದರು. ಸಿದ್ದೇಶ್ವರ ಸ್ವಾಮೀಜಿಗೆ ಜೈಕಾರ ಕೂಗಿದ್ರು.
ಆದಿಚುಂಚನ ಶ್ರೀಗಳು, ವಚನಾನಂದ ಶ್ರೀಗಳು ಸೇರಿದಂತೆ ನಾನಾ ಮಠಾಧೀಶರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ್ರು. ಸಿದ್ದೇಶ್ವರ ಶ್ರೀಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದನ್ನೂ ಓದಿ: ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ- ಡೆತ್‌ನೋಟ್‌ನಲ್ಲಿ ಪ್ರಭಾವಿ ರಾಜಕಾರಣಿ ಹೆಸರು ಉಲ್ಲೇಖ
ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಹಲವು ಶಾಸಕರು, ಮಾಜಿ ಶಾಸಕರು ಸೇರಿದಂತೆ ಗಣ್ಯರು ತಂಡೋಪ ತಂಡವಾಗಿ ಬಂದು ಶ್ರೀಗಳ ದರ್ಶನ ಪಡೆದರು. ವೈದ್ಯರ ತಂಡದೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಸದ್ಯ ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಆದ್ರೆ ಭಕ್ತರು ಮಾತ್ರ ಮಠದ ಹೊರಗಡೆನೇ ಶ್ರೀಗಳ ದರ್ಶನಕ್ಕೆ ಕಾದು ಕುಳಿತಿದ್ದಾರೆ.