ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಹೊರಬಂದಿರುವ ಖೈದಿ ತುರುವನೂರು ಸಿದ್ಧಾರೂಢ (Siddharoodha) ಇದೀಗ ದರ್ಶನ್ ಭೇಟಿಯಾಗಿದ್ದರ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ದರ್ಶನ್‌ರನ್ನು ಅಲ್ಲಿ ನೋಡಿ ಬೇಜಾರಾಯಿತು ಎಂದು ಪಬ್ಲಿಕ್ ಟಿವಿಗೆ ಸಿದ್ಧಾರೂಢ ಮಾತನಾಡಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಜೊತೆ ಸೊಂಟ ಬಳುಕಿಸಲಿದ್ದಾರೆ ‘ಪುಷ್ಪ 2’ ನಟಿ
Advertisement
ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್‌ರನ್ನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು. ಆ ಜಾಗದಲ್ಲಿ ದರ್ಶನ್‌ರನ್ನು ನೋಡಿ ಬೇಜಾರಾಯಿತು. ಬಳಿಕ ಅವರಿಗೆ ನಾನು ಪಿರಮಿಡ್ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಮಾಡಿದ ನಂತರ ಇದು ಒಂದು ಥರ ಚೆನ್ನಾಗಿದೆ ಕಂಟಿನ್ಯೂ ಮಾಡಬಹುದು ಎಂದು ದರ್ಶನ್ ಹೇಳಿದ್ರು ಎಂದು ಸಿದ್ಧಾರೂಢ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ ಸಮಾಜದ ಮೇಲೆ ಪರಿಣಾಮ ಬೀರುತ್ತದೆ: ನಟ ಕಿಶೋರ್
Advertisement
Advertisement
ಆಧ್ಯಾತ್ಮಿಕದ ಪುಸ್ತಕಗಳನ್ನೇ ಜಾಸ್ತಿ ಓದಿದ್ದಾರೆ ಅಲ್ಲಿ. ಕಾರಾಗೃಹದಲ್ಲಿ ಅವರನ್ನು ನೋಡೋದು ಬೇಜಾರಾಗುತ್ತದೆ. ದರ್ಶನ್ ಸರ್ ಮಾಡಿದ್ದು ತಪ್ಪೋ ಸರಿಯೋ ಅದನ್ನು ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಕೊನೆಯವರೆಗೂ ನಮ್ಮ ಜೊತೆಗೆ ಇರೋದು ಹೆಂಡತಿ, ಮಕ್ಕಳು ಮಾತ್ರ. ದರ್ಶನ್ ಸರ್‌ಗೆ ಆದಷ್ಟು ಬೇಗ ಒಳ್ಳೆಯದಾಗಲಿ. ಅವರು ಆದಷ್ಟು ಬೇಗ ಹೊರಗೆ ಬರುತ್ತಾರೆ ಅನ್ನೋ ಭರವಸೆ ನನ್ನದು ಎಂದು ಸಿದ್ಧಾರೂಢ ಮಾತನಾಡಿದ್ದಾರೆ.
Advertisement
ನನಗೆ ನಾನು ಜೈಲಿಗೆ ಹೋಗಿದ್ದು ಅಷ್ಟು ಬೇಜಾರು ಆಗಲಿಲ್ಲ. ಆದರೆ ದರ್ಶನ್ ಸರ್ ಜೈಲಿಗೆ ಬಂದಿದ್ದು ಬಹಳ ಬೇಸರ ಆಯ್ತು. ನಾನು ಯಾಕೆ ಜೈಲಿಗೆ ಬಂದೆ ಎಂದು ವಿಚಾರಿಸಿದರು. ಬಳಿಕ ಹೊಸ ಜೀವನ ಸಿಕ್ಕಿದೆ. ಒಳ್ಳೆಯದಾಗಲಿ ಎಂದು ಮಾತನಾಡಿದ್ದರು. ನೀನು ನನ್ನ ಸೆಲೆಬ್ರಿಟಿ. ಹಾಗೆಯೇ ನಾನು ನಿನ್ನ ಸೆಲೆಬ್ರಿಟಿ ಎಂದು ಹೇಳಿದ್ರು ಎಂದು ಸಿದ್ಧಾರೂಢ ಮಾತನಾಡಿದ್ದಾರೆ.
ನಾನು ಕಳೆದ 21 ವರ್ಷಗಳಿಂದ ಜೈಲಿನಲ್ಲಿ ಇದ್ದೇನೆ. ನನಗೆ ಗೊತ್ತು. ದರ್ಶನ್ ಸರ್ ನಿಜವಾಗಲೂ ನರಕ ಅನುಭವಿಸುತ್ತಿದ್ದಾರೆ. ನಾನು ಭೇಟಿಯಾದ ಅವರು ಡಲ್ ಆಗಿದ್ರೂ. ‘ಕಾಟೇರ’ ಸಿನಿಮಾದಲ್ಲಿ ಇದ್ದ ಬಾಡಿಗೂ ಈಗ ಇರುವ ಬಾಡಿಗೂ ಬದಲಾವಣೆ ಆಗಿದೆ. ಅವರಿಗೆ ವಿಐಪಿ ಟ್ರೀಟ್ಮೆಂಟ್ ನಿಜವಾಗಲೂ ಕೊಟ್ಟೇ ಇಲ್ಲ. ಎಲ್ಲರ ಹಾಗೇ ಅವರನ್ನು ನೋಡ್ತಿಕೊಳ್ತಿದ್ದಾರೆ. ಅವರು ನೆಲದ ಮೇಲೆ ಮಲ್ಕೋತ್ತಾರೆ. ಸೊಳ್ಳೆ ಪರದೆ ಇದೆ. ಕುಡಿಯೋಕೆ ವಾಟರ್ ಕ್ಯಾನ್‌ನಲ್ಲಿ ನೀರಿದೆ ಅಷ್ಟೇ. ವಿಶೇಷ ಸೌಲಭ್ಯ ಅಂತೇನು ಎಂದು ಮಾತನಾಡಿದ್ದಾರೆ.