ಬೆಣ್ಣೆ ನಗರಿ ದಾವಣಗೆರೆಯಲ್ಲಿ ಇಂದು ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅವರಿಗಾಗಿ ತಯಾರಾದ ಎರಡು ಹಾಡುಗಳು ರಿಲೀಸ್ ಆಗುತ್ತಿದೆ. ಇಂದು ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮೋತ್ಸವ ಎಂದು ಹೆಸರಿಡಲಾಗಿದೆ. ಈ ಸಮಾರಂಭದಲ್ಲಿ ಸಿನಿಮಾ ಮಾದರಿಯ ಎರಡು ಹಾಡುಗಳು ಬಿಡುಗಡೆ ಆಗಲಿವೆ.
Advertisement
ಒಂದು ಹಾಡಿಗೆ ಮೈಸೂರು ಹುಲಿಯಾ ಎಂದು ಹೆಸರಿಟ್ಟಿದ್ದರೆ ಮತ್ತೊಂದು ಗೀತೆಗೆ ಸೆಲ್ಫ್ ಮೇಡ್ ಸಿದ್ದಣ್ಣ ಎಂದು ಶೀರ್ಷಿಕೆ ಇಡಲಾಗಿದೆ. ಈ ಎರಡೂ ಹಾಡುಗಳನ್ನೂ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಬರೆದಿದ್ದಾರೆ. ಸಲದ ಟಿಣಿಂಗ್ ಮಿಣಿಂಗ್ ಹಾಡು ಹೇಳುವ ಮೂಲಕ ಖ್ಯಾತಿಯಾಗಿರುವ ಗಿರಿಜಾ ಸಿದ್ಧಿ ಒಂದು ಗೀತೆಯನ್ನು ಹಾಡಿದ್ದು, ಮತ್ತೊಂದು ಹಾಡನ್ನು ಚುಟುಚುಟು ಹಾಡಿನ ಖ್ಯಾತಿಯ ರವೀಂದ್ರ ಸೊರಗಾವಿ ಹೇಳಿದ್ದಾರೆ. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್
Advertisement
Advertisement
ಈ ಎರಡೂ ಹಾಡುಗಳು ಸಿದ್ಧರಾಮಯ್ಯ ಅವರ ಜೀವನ ಮತ್ತು ಹೋರಾಟದ ಗೀತೆಗಳಾಗಿದ್ದು, ವೀರ ಸಮರ್ಥ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿವೆ. ಈಗಾಗಲೇ ಈ ಹಾಡುಗಳ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಿದ್ದರಾಮಯ್ಯನವರ ಸಾಧನೆಯನ್ನು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದಾರೆ ಚೇತನ್ ಕುಮಾರ್.