ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

Public TV
1 Min Read
siddant chaturvedi

ಬಾಲಿವುಡ್‌ನ ಯಂಗ್ ಹೀರೋ ಸಿದ್ಧಾಂತ್ ಚತುರ್ವೇದಿ (Siddant Chaturvedi) ತಮ್ಮ ಸಿನಿಮಾಗಳಿಗಿಂತ ಡೇಟಿಂಗ್ ವಿಷ್ಯವಾಗಿಯೇ ಬಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ(Navya Naveli Nanda) ಜೊತೆಗಿನ ಸಿದ್ಧಾಂತ್ ಡೇಟಿಂಗ್ ಇದೀಗ ಬಿಟೌನ್‌ನ ಹಾಟ್ ಟಾಪಿಕ್ ಆಗಿದೆ.

`ಗಲ್ಲಿಬಾಯ್'(Gully Boy) ಚಿತ್ರದ ಮೂಲಕ ಬಿಟೌನ್‌ಗೆ ಎಂಟ್ರಿ ಕೊಟ್ಟ ಸಿದ್ಧಾಂತ್ ಸದ್ಯ ʻಫೋನ್ ಬೂತ್ʼ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ನವ್ಯಾ ಜೊತೆಗಿನ ಡೇಟಿಂಗ್ ಬಗ್ಗೆ ಸಿದ್ಧಾಂತ್‌ಗೆ ಕೇಳಲಾಗಿದೆ. ಈ ಬಗ್ಗೆ ನಟ ಸಿದ್ಧಾಂತ್ ಕೂಡ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ನಾನು ಡೇಟಿಂಗ್ ಮಾಡುತ್ತಿದ್ದೇನೆ, ಯಾರನ್ನಾದರೂ ನೋಡುತ್ತಿದ್ದೇನೆ ಎಂದು ಗಾಸಿಪ್ ಆಗಿದ್ದರೆ, ನಾನು ವಿಷ್ಯ ನಿಜವಾಗಲಿ ಎಂದು ಬಯಸುತ್ತೇನೆ ಎಂದು ಮಾತನಾಡಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಕೂಡ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಇವರಿಬ್ಬರ ಡೇಟಿಂಗ್ ವಿಷ್ಯ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್‌ಗೆ ಶಾಕ್ ಕೊಟ್ಟ ಜಿಎಸ್‌ಟಿ ಅಧಿಕಾರಿಗಳು

`ಫೋನ್ ಬೂತ್’ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಕತ್ರಿನಾ ಕೈಫ್ ಜೊತೆ ಪ್ರಮುಖ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ನಟಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article