ಕೊಪ್ಪಳ: ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಯವರು ಪೀಠತ್ಯಾಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ ಹಾಗೂ ವಿದ್ಯಾರ್ಥಿನಿಯ ಫೋಟೋ ವೈರಲ್ ಆಗಿದೆ.
ಸ್ವಾಮೀಜಿ ಹಾಗೂ ವಿದ್ಯಾರ್ಥಿನಿಯ ಫೋಟೋವನ್ನು ಎಡಿಟ್ ಮಾಡಿ ಅದಕ್ಕೆ ‘ಮೇಡ್ ಫಾರ್ ಇಚ್ ಅದರ್’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದನ್ನು ವೈರಲ್ ಮಾಡಲಾಗಿದೆ. ಈ ಫೋಟೋ ಈಗ ವಾಟ್ಸಾಪ್ ಗ್ರೂಪಿನಲ್ಲೂ ಹರಿದಾಡುತ್ತಿದೆ.
ಸ್ವಾಮೀಜಿ ಪ್ರೀತಿಗಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೇ ಪ್ರೀತಿಸಿದ ವಿದ್ಯಾರ್ಥಿನಿಯೊಂದಿಗೆ ಸ್ವಾಮೀಜಿ ಮದುವೆಯಾಗಲು ಪೀಠತ್ಯಾಗ ಮಾಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ವಿದ್ಯಾರ್ಥಿನಿ ಸಹ ಈಗ ನಾಪತ್ತೆಯಾಗಿದ್ದು, ಈಗ ಇಬ್ಬರೂ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಇದನ್ನೂ ಓದಿ: ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?
13ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯವರು ಮುಂಡರಗಿಯ ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದರು. ಇದೀಗ ಕಾಲೇಜಿಗೆ ಬರುತ್ತಿದ್ದ ತಮ್ಮ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಈ ಮಠವೂ ಉಜ್ಜಯನಿಯ ಶಾಖಾ ಪೀಠದಲ್ಲೊಂದಾಗಿದೆ. ಇದೇ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಗುಮಾನಿಯೂ ಹರಿದಾಡುತ್ತಿದೆ. ಆದರೆ ಒಂದು ಗುಂಪು ಮಠದ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಮನನೊಂದು ಮಠತ್ಯಾಗ ಮಾಡಿದ್ದಾರೆ ಅಂದು ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv