ಬೆಂಗಳೂರು: ಚುನಾವಣೆಗೆ (Election) ಪಕ್ಷದ ಅಭ್ಯರ್ಥಿಗಳನ್ನ ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
Advertisement
ನಿನ್ನೆ ಕೊಪ್ಪಳದ ಮದುವೆ ಸಮಾರಂಭದ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ, ನನಗೂ ಘೋಷಣೆ ಮಾಡುವ ಹಕ್ಕಿಲ್ಲ. ಎಐಸಿಸಿಗೆ (AICC) ಮಾತ್ರ ಹಕ್ಕು ಇದೆ ಎಂದಿದ್ದಾರೆ. ಇದನ್ನೂ ಓದಿ: ಮದುವೆ ವೇದಿಕೆಯಲ್ಲೇ ಅಭ್ಯರ್ಥಿಗಳ ಘೋಷಣೆ – ಡಿಕೆಶಿಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ
Advertisement
Advertisement
ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಕೆಲ ಸಂದರ್ಭಗಳಲ್ಲಿ ಕಳೆದ ಸೋಲು ಕಂಡವರಿಗೆ ಎನ್‌ಕರೇಜ್ ಮಾಡಿ ಹೇಳಿರಬಹುದು. ಅದನ್ನು ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ನಮಗೆ ಹೈಕಮಾಂಡ್, ಅವರಿಗೆ ಘೋಷಣೆ ಮಾಡುವ ಹಕ್ಕಿದೆ. ನನಗೂ ಕೂಡ ಆ ಹಕ್ಕಿಲ್ಲ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್
Advertisement
ವೋಟರ್ ಐಡಿ (Voter ID) ಹಗರಣದ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ನಾಳೆಗೆ ಸಮಯ ಕೇಳಿದ್ದೇವೆ. ನಮಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರೇ ಬೇಕು. ನಮ್ಮ ಹತ್ರ ಅನೇಕ ಮಾಹಿತಿಗಳಿವೆ. ಪೊಲೀಸ್ ಅಧಿಕಾರಿಗಳು ಏನು ಮಾಡ್ತಿದ್ದಾರೆ ಅನ್ನೋದನ್ನ ಗಮನಿಸುತ್ತಿದ್ದೇವೆ. ನಮ್ಮ ಕಡೆ ಏನೇನು ಎಂಒಯು ಗಳಿವೆ, ಡಿಟೈಲ್ ತನಿಖೆ ಮಾಡಿದ್ದೇವೆ. ಮಾಧ್ಯಮಗಳಲ್ಲಿ ಎಲೆಕ್ಷನ್ ಅಫೀಸರ್ ಅವರೇ ಒಪ್ಪಿಕೊಂಡಿದ್ದಾರೆ. ನಮಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ಆದೇಶ ಬಂತು, ಆದೇಶ ಬಂದಿದ್ದಕ್ಕೆ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾರು ಆ ಉನ್ನತ ಅಧಿಕಾರಿ? 15,000 ಸಾವಿರಕ್ಕೆ ಕೆಲಸಕ್ಕೆ ಬಂದಿರುವ ಒಬ್ಬರು-ಇಬ್ಬರನ್ನ ಅರೆಸ್ಟ್ ಮಾಡುವುದಲ್ಲ. ಯಾರು ಕಿಂಗ್ ಪಿನ್? ಯಾರು ಮಂತ್ರಿಗಳು ಇದ್ದಾರೆ? ಶಾಸಕರು ಇದ್ದಾರೆ ಅದು ಬಯಲಾಗಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಬಳಿ ಶಾಸಕರ ಶಿಫಾರಸ್ಸು ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಫೋನ್‌ನಲ್ಲಿ ಮಾತಾಡಿದ್ದು ದಾಖಲೆ ಇದೆ. ರಾಜರಾಜೇಶ್ವರಿ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ 28 ಕ್ಷೇತ್ರದ ಎಆರ್‌ಒಗಳ ಮೇಲೆ ಕೇಸ್ ದಾಖಲು ಆಗಬೇಕು. ಈ ಬಗ್ಗೆ ಪೊಲೀಸರು ಏನ್ ಮಾಡ್ತಿದ್ದಾರೆ ಅಂತಾ ನೋಡ್ತಾ ಇದ್ದೀವಿ ಎಂದು ಹೇಳಿದ್ದಾರೆ.