ಬೆಂಗಳೂರು: ಶಿವಮೊಗ್ಗದ ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕೋಕೆ ಹೋದರು ಎಂಬ ಸಿದ್ದರಾಮಯ್ಯ ಹೇಳಿಕೆ ಟ್ವಿಟ್ಟರ್‍ನಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ.
ಸಿದ್ದರಾಮಯ್ಯ ಅವರು ಹೇಳಿದ್ದ `ಮುಸ್ಲಿಂ ಏರಿಯಾ’ ಪದ ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆಗಿದೆ. ಅಲ್ಲದೆ ಪಕ್ಷದಲ್ಲೂ ಸಿದ್ದರಾಮಯ್ಯ ವಿರೋಧಿ ಬಣ ಕೂಟ ಟೀಕಿಸಿದೆ ಅಂತ ತಿಳಿದು ಬಂದಿದೆ. ಮಂಗಳವಾರ ಶಿವಮೊಗ್ಗ ಗಲಭೆ ಸಂಬಂಧ ಮಾಜಿ ಸಚಿವ ಈಶ್ವರಪ್ಪನವರು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ನನ್ನ ಗಂಡ ನಮಾಜ್‌ಗೆ ಹೋಗಿದ್ರು, ಗಲಾಟೆಗೂ ನನ್ನ ಪತಿಗೂ ಸಂಬಂಧ ಇಲ್ಲ: ಆರೋಪಿ ಜಬಿ ಪತ್ನಿ
ಬಳಿಕ ಘಟನೆಯನ್ನು ಖಂಡಿಸುವಾಗ ಇವತ್ತಿನ ಪರಿಸ್ಥಿತಿಗೆ ಸಿದ್ದರಾಮಯ್ಯ, ಡಿಕೆಶಿ ಕಾರಣ ಅಂತ ಈಶ್ವರಪ್ಪ ಟೀಕಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಈ ಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ. ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದು. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ದಾರೆ. ಹಾಕಲಿ ಬೇಡ ಅನ್ನಲ್ಲ. ಆದ್ರೆ ಟಿಪ್ಪು ಫೋಟೋ ತೆಗೀತಾರೆ. ಹೀಗೆ ಮಾಡಿದ್ರೆ ಗಲಭೆ ಆಗಲ್ವಾ..? ತಪ್ಪು ಅವರು ಮಾಡಿ ಕಾಂಗ್ರೆಸ್ ಮೇಲೆ ಹಾಕ್ತಾರೆ. ಮಗೂನು ಚಿವುಟುತ್ತಾರೆ ತೊಟ್ಟಿಲು ತೂಗ್ತಾರೆ. ಘಟನೆಯಲ್ಲಿ ಎಸ್‍ಡಿಪಿಐ ಇದ್ದರೆ ಕ್ರಮ ತೆಗೆದುಕೊಳ್ಳಿ. ಸರ್ಕಾರ ನಿಮ್ಮದೇ ಇದೆ. ಎಸ್‍ಡಿಪಿಐ, ಪಿಎಫ್‍ಐ ಸಮರಸ್ಯ ಹಾಳು ಮಾಡುತ್ತಿದ್ದಾರೆ ಅಂತ ನಿಮ್ಮ ಬಳಿ ದಾಖಲೆ ಇದ್ರೆ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದರು.
ಸಿದ್ದರಾಮಯ್ಯ ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಓಲೈಕೆ ಮಾಡ್ತಾರೆ ಅನ್ನೋ ಆರೋಪ ಮೊದಲಿನಿಂದಲೂ ಈ ಬಣ ಮಾಡ್ತಿತ್ತು. ಇದೀಗ ಈ ಬಗ್ಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. `ಮುಸ್ಲಿಂ’ ವಿರೋಧಿ ಪದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಹಂತದಲ್ಲಿ ಓಲೈಕೆ ಬೇಕಿತ್ತೇ…? ಅಂತ ಟೀಕೆಯೂ ವ್ಯಕ್ತವಾಗಿದೆ.