ಬೆಂಗಳೂರು: ನಾನು ಮಾತಾಡುವಾಗ ನೀವೆಲ್ಲಾ ಸಂದರ್ಭಕ್ಕೆ ಅಗತ್ಯದಂತೆ ಮಧ್ಯ ಪ್ರವೇಶ ಮಾಡುತ್ತೀರಿ. ಆದರೆ ಈಶ್ವರಪ್ಪ ದುರುದ್ದೇಶದಿಂದಲೇ ಮಧ್ಯ ಪ್ರವೇಶ ಮಾಡುತ್ತಾರೆ. ಅವರಿಗೆ ಗೊತ್ತಿದೆ ಮಧ್ಯ ಪ್ರವೇಶ ಮಾಡಿದರೆ ಜಗಳ ಆಗುತ್ತದೆ ಅಂತಾ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವ ಈಶ್ವರಪ್ಪ ಬಗ್ಗೆ ಸಿದ್ದರಾಮಯ್ಯ ಹಾಸ್ಯ ಮಾಡಿ ಕಾಲೆಳೆದರು. ನಾನು ಮಾತಾಡುವಾಗ ನೀವೆಲ್ಲಾ ಸಂದರ್ಭಕ್ಕೆ ಅಗತ್ಯದಂತೆ ಮಧ್ಯ ಪ್ರವೇಶ ಮಾಡುತ್ತೀರಿ. ಆದರೆ ಈಶ್ವರಪ್ಪ ದುರುದ್ದೇಶದಿಂದಲೇ ಮಧ್ಯ ಪ್ರವೇಶ ಮಾಡುತ್ತಾರೆ. ಅವರಿಗೆ ಗೊತ್ತಿದೆ ಮಧ್ಯ ಪ್ರವೇಶ ಮಾಡಿದರೆ ಜಗಳ ಆಗುತ್ತದೆ ಅಂತಾ. ಯಾಕೆಂದರೆ ಈಶ್ವರಪ್ಪ ಆಡುವುದೇ ಜಗಳದ ಮಾತುಗಳನ್ನು. ಜಗಳ ಮಾಡುಬೇಕು ಅಂತಾನೇ ಬರುತ್ತಾರೆ. ನನ್ನ ದಾರಿ ತಪ್ಪಿಸಬೇಕು, ನನ್ನ ಮಾತಿನ ಚೈನ್ ಬ್ರೇಕ್ ಮಾಡಬೇಕು ಅಂತಾನೆ ಬರುತ್ತಾರೆ. ಮಧ್ಯ ಪ್ರವೇಶ ಮಾಡಿದರೆ ಜಗಳ ಮಾಡಬಹುದು ಅಂತಾ ಈಶ್ವರಪ್ಪ ಲೆಕ್ಕಾಚಾರ ಅಂತಾ ಸಿದ್ದರಾಮಯ್ಯ ಟಕ್ಕರ್ ಕೊಟ್ಟರು. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ
ಸಿದ್ದರಾಮಯ್ಯ, ಈಶ್ವರಪ್ಪ ಬಗ್ಗೆ ತಮಾಷೆ ಮಾಡಿದಾಗ ಈಶ್ವರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರು ನಗ್ತಿದ್ರು. ಇಡೀ ಸದನವೇ ನಗೆಯಲ್ಲಿ ಮುಳುಗಿತ್ತು. ಇದನ್ನೂ ಓದಿ: ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ
ಈ ಮೊದಲು ಬಜೆಟ್ ಭಾಷಣಕ್ಕೆ ಸಿದ್ದರಾಮಯ್ಯ ಎದ್ದು ನಿಂತಾಗ ಮಧ್ಯಾಹ್ನದ ಒಳಗೆ ಭಾಷಣ ಮುಗಿಸಿ ಎಂದು ಸ್ಪೀಕರ್ ಸೂಚಿಸಿದ್ರು. ಆಗ ಸಿದ್ದರಾಮಯ್ಯ ನೋ.. ನೋ.. ಪ್ರಶ್ನೋತ್ತರ ತಡವಾಗಿದೆ, ಮಧ್ಯಾಹ್ನದ ಮೇಲೂ ಸ್ವಲ್ಪ ಮಾತನಾಡ್ತೀನಿ ಅಂತೇಳಿದ್ರು. ತಕ್ಷಣವೇ ಮಧ್ಯಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ ಭಾಷಣ ಹಿಗ್ಗಿಸುವುದು ಕುಗ್ಗಿಸುವುದು ನಿಮ್ಮ ಕೈಯಲ್ಲಿದೆ ಎಂದರು. ಆಗ ಸಿದ್ದರಾಮಯ್ಯ ತಿರುಗೇಟು ಕೊಟ್ಟರು. ಹೌದು ನನ್ನ ಕೈಯಲ್ಲಿ ಇರುವುದು ನಿಮ್ಮ ಕೈಯಲ್ಲಿ ಇಲ್ಲ. ನನ್ನ ಮತ್ತು ಅಧ್ಯಕ್ಷರ ಕೈಯಲ್ಲಿ ಇದೆ ಅಂತಾ ಟಾಂಗ್ ಕೊಟ್ಟರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.