ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಎಲ್ಲಿ ಹೋದರೂ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಲ್ಲ. ಹೀಗಾಗಿ ಅವರು ಪ್ರತಿ ಸಲ ಅಬ್ಬೇಪಾರಿಯಂತೆ ಓಡಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಜೋಶಿ, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಜನರು ಸೋಲಿಸಿ ಮನೆಗೆ ಕಳುಹಿಸಿದರು. ಬಾದಾಮಿಯಲ್ಲಿ ಅವರಿಗೆ ಪುಣ್ಯ ಇತ್ತೋ ಏನೋ, ಆರಿಸಿ ಬಂದರು. ದೊಡ್ಡ ನಾಯಕರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಅಲ್ಲಿ ಗೆದ್ದರು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಕೊಡವರಂತೆ ತಮ್ಮ ಸಮುದಾಯದವರ ನರಮೇಧ ಮಾಡಿದ್ರೆ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡ್ತಿದ್ರಾ? ಪ್ರತಾಪ ಸಿಂಹ
Advertisement
Advertisement
ಈ ಸಲ ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿದ್ದಾರೆ. ನಾನು ಕೋಲಾರದವರಿಗೆ ಹೇಳುತ್ತೇನೆ, ಚಾಮುಂಡೇಶ್ವರಿಯಲ್ಲಿ ಏನ್ ಮಾಡಿದ್ದಾರೆ, ಬಾದಾಮಿಯಲ್ಲಿ ಏನ್ ಮಾಡಿದ್ದಾರೆ ಕೇಳಿ. ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ನಾನು ಇವತ್ತೇ ಹೇಳುತ್ತೇನೆ. ಸಿದ್ದರಾಮಯ್ಯ ಇನ್ನು ಸ್ವಲ್ಪ ದಿನದಲ್ಲಿ ಯಾವ ಪಾರ್ಟಿಗೆ ಹೋಗುತ್ತಾರೆ ನೋಡೋಣ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಒಕ್ಕಲಿಗರ ಮತಗಳು ಬಿಜೆಪಿಗೆ ವಾಲುತ್ತಿರುವುದು ಹೆಚ್‌ಡಿಕೆಗೆ ಆತಂಕ ಹೆಚ್ಚಿಸಿದೆ – ಸಿ.ಪಿ.ಯೋಗೇಶ್ವರ್