ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪುತ್ರ ಝೈದ್ ಖಾನ್ (Zaid Khan) ನಾಯಕ ನಟನಾಗಿ ನಟಿಸಿರೋ ಬನಾರಸ್ ಸಿನಿಮಾ ವೀಕ್ಷಣೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಝೈದ್ ಖಾನ್ ಹಾಗೂ ಸೋನಂ ಮಾಂಟೇರೋ ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದೆ.
ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ.
ಚಿತ್ರರಂಗ ಬೆಳೆಯಲಿ,
ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ. pic.twitter.com/vcgPT7f2u0
— Siddaramaiah (@siddaramaiah) November 6, 2022
ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು, ಬನಾರಸ್ (Banaras) ಹವಾ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಸಿನಿಮಾ (Cinema) ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ. ಇದನ್ನೂ ಓದಿ: ಝೈದ್ ಖಾನ್ ನಟನೆಯ ‘ಬನಾರಸ್’ : ಬಾಕ್ಸಾಫೀಸ್ ನಲ್ಲೂ ಭರ್ಜರಿ ಭರಾಟೆ
ಹೊಸ ನಟನೊಬ್ಬನ ಸಿನಿಮಾವೊಂದು ಮೊದಲ ದಿನದ ಪ್ರಮಾಣದಲ್ಲೇ ಭರ್ಜರಿ ಕಲೆಕ್ಷನ್ ಮಾಡಿದ್ದು, ಸಿನಿಮಾ ರಂಗದಲ್ಲಿ ಹೊಸ ಭರವಸೆ ಮೂಡಿಸಿದೆ. ಕೇವಲ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮಾತ್ರವಲ್ಲ, ಝೈದ್ ನಟನೆಗೂ ನೋಡುಗರು ಫಿದಾ ಆಗಿದ್ದಾರೆ. ಕನ್ನಡಕ್ಕೆ ಮತ್ತೋರ್ವ ಹೊಸ ಪ್ರತಿಭೆ ಸಿಕ್ಕಿದ್ದಾನೆ ಎಂದು ಕೊಂಡಾಡಿದ್ದಾರೆ. ಝೈದ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಯ ನೋಡುಗರಿಗೂ ಇಷ್ಟವಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್
ಸಿನಿಮಾ ವೀಕ್ಷಣೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸಹ ಬನಾರಸ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. `ಝೈದ್ ಖಾನ್ ಹಾಗೂ ಸೋನಲ್ ಮಾಂಟೇರೋ (Sonal Monteiro) ಅಭಿನಯದ ಬನಾರಸ್ ಚಿತ್ರ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದೇನೆ. ನೈಜತೆಯಿಂದ ಕೂಡಿದ ಪಾತ್ರಗಳು, ಸ್ವಾರಸ್ಯಕರವಾದ ಕತೆಯನ್ನು ಒಳಗೊಂಡಿರುವ ಸದಭಿರುಚಿಯ ಚಲನಚಿತ್ರವಿದು. ಇಂತಹ ಚಿತ್ರಗಳ ಸಂಖ್ಯೆ ನೂರಾಗಲಿ, ಚಿತ್ರರಂಗ ಬೆಳೆಯಲಿ, ಚಿತ್ರತಂಡ ಬೆಳೆಯಲಿ. ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದ್ದಾರೆ.