CinemaKarnatakaLatestMain PostSandalwood

ಝೈದ್ ಖಾನ್ ನಟನೆಯ ‘ಬನಾರಸ್’ : ಬಾಕ್ಸಾಫೀಸ್ ನಲ್ಲೂ ಭರ್ಜರಿ ಭರಾಟೆ

ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು, ಬನಾರಸ್ ಪ್ರಭೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಸಿನಿಮಾದ ಒಟ್ಟಾರೆ ಕಲೆಕ್ಷನ್ ಬಗ್ಗೆ ಎಲ್ಲರ ಚಿತ್ತ ಕದಲಿಕೊಂಡಿದೆ. ಈ ಬಗ್ಗೆ ಇದೀಗ ಚಿತ್ರತಂಡದ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

ಅದರನ್ವಯ ಹೇಳೋದಾದರೆ, ಬನಾರಸ್ ಮೊದಲ ದಿನದ ಕಲೆಕ್ಷನ್ ಮೂರು ಕೋಟಿ ಮೀರಿಕೊಂಡಿದೆ. ಮೊದಲ ದಿನವೇ ಸಿನಿಮಾ ನೋಡಿದವರ ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುತ್ತಿರೋದರಿಂದ, ಎರಡನೇ ದಿನ ಆ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ. ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಝೈದ್ ಖಾನ್ ನಟನೆಯನ್ನೂ ಕೂಡಾ ಪ್ರೇಕ್ಷಕರು ಕೊಂಡಾಡಲಾರಂಭಿಸಿದ್ದಾರೆ. ಇದನ್ನೂ ಓದಿ:`ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

ಹೊಸ ನಟನೊಬ್ಬನ ಸಿನಿಮಾವೊಂದು ಮೊದಲ ದಿನ ಈ ಪ್ರಮಾಣದಲ್ಲಿ ದುಡ್ಡು ಮಾಡಿದ್ದು ನಿಜಕ್ಕೂ ಸಿನಿಮಾ ರಂಗದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕೇವಲ ಬಾಕ್ಸ್ ಆಫೀಸಿನಲ್ಲಿ ದಾಖಲೆ ಮಾತ್ರವಲ್ಲ, ಝೈದ್ ನಟನೆಗೂ ನೋಡುಗರು ಫಿದಾ ಆಗಿದ್ದಾರೆ. ಕನ್ನಡಕ್ಕೆ ಮತ್ತೋರ್ವ ಹೊಸ ಪ್ರತಿಭೆ ಸಿಕ್ಕಿದ್ದಾನೆ ಎಂದು ಕೊಂಡಾಡಿದ್ದಾರೆ. ಝೈದ್ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಯ ನೋಡುಗರಿಗೂ ಇಷ್ಟವಾಗಿದ್ದಾರೆ ಎನ್ನುವುದು ವಿಶೇಷ.

Live Tv

Leave a Reply

Your email address will not be published. Required fields are marked *

Back to top button