ಸಿಇಟಿ ಪರೀಕ್ಷೆ ದಿನವೇ ಪ್ರಮಾಣವಚನ – ಮೋದಿ ರ‍್ಯಾಲಿ ಇರೋವಾಗ ಮಾತ್ರ ನಿಮ್ಗೆ ವಿದ್ಯಾರ್ಥಿಗಳು ಕಾಣೋದ?: ಬಿಎಲ್ ಸಂತೋಷ್

Public TV
2 Min Read
BL Santosh

ಬೆಂಗಳೂರು: ಶನಿವಾರ ಹಾಗೂ ಭಾನುವಾರ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ (CET Exam) ನಡೆಯಲಿದೆ. ಇದೇ ಸಂದರ್ಭದಲ್ಲಿ ಶನಿವಾರ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಬೆಂಗಳೂರಿನ (Bengaluru) ವಿದ್ಯಾರ್ಥಿಗಳಿಗೆ ಟ್ರಾಫಿಕ್ ಜಾಮ್ ಆತಂಕ ಎದುರಾಗಿದೆ.

Siddaramaiah BL Santosh

ವಿಧಾನಸಭಾ ಚುನಾಣೆಗೂ ಮುನ್ನ ಬಿಜೆಪಿ (BJP) ಪಕ್ಷದ ಪರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ರೋಡ್‌ಶೋ (Road Show) ಮಾಡಿದ್ದರು. ಬೆಂಗಳೂರಿನಲ್ಲಿ ಮೋದಿ ರೋಡ್‌ಶೋ ಮಾಡಿದ್ದ ಒಂದು ದಿನ ನೀಟ್ ಪರೀಕ್ಷೆಯೂ (NEET Exam) ಇತ್ತು. ಇದಕ್ಕೆ ಕಾಂಗ್ರೆಸ್ಸಿಗರು ಮೋದಿ ರೋಡ್‌ಶೋಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಇದೀದ ಸಿದ್ದರಾಮಯ್ಯ ಪ್ರಮಾಣವಚನ ತೆಗೆದುಕೊಳ್ಳುವ ದಿನವೇ ಸಿಇಟಿ ಪರೀಕ್ಷೆ ಇರುವುದರಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

CET EXAM 5 medium

ಈ ಹಿಂದೆ ಸಿದ್ದರಾಮಯ್ಯ ಅವರು, ಬೇಜವಾಬ್ದಾರಿ ಹಾಗೂ ಬೆಂಗಳೂರಿನ ಜನರ ವಿರೋಧವನ್ನು ಲೆಕ್ಕಿಸದೇ ರೋಡ್ ಶೋ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡುವ ಮೂಲಕ ಕೌಂಟರ್ ಕೊಟ್ಟಿರುವ ಸಂತೋಷ್, ಮೋದಿ ರ‍್ಯಾಲಿ ಮಾಡೋವಾಗ ಮಾತ್ರ ನಿಮಗೆ ವಿದ್ಯಾರ್ಥಿಗಳು ಕಾಣೋದಾ? ಸಿಇಟಿ ಪರೀಕ್ಷೆ ದಿನವೇ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟು ಪ್ರಮಾಣವಚನ ಕಾರ್ಯಕ್ರಮ ಮಾಡುತ್ತಿದ್ದೀರಿ. ಈಗ ನೀವು ಮಾಡುತ್ತಿರುವುದು ಸರೀನಾ ಎಂದು ಸಿದ್ದು ಹಾಗೂ ಡಿಕೆಶಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೇ 20, 21 ರಂದು ಸಿಇಟಿ ಪರೀಕ್ಷೆ – ಪ್ರಮಾಣವಚನ ಹಿನ್ನೆಲೆ ಟ್ರಾಫಿಕ್ ಆತಂಕ

ಈ ಬಾರಿ ಸಿಇಟಿ ಪರೀಕ್ಷೆ ರಾಜ್ಯದ 592 ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನಲ್ಲೇ 121 ಪರೀಕ್ಷಾ ಕೇಂದ್ರಗಳಿದ್ದು, ಉಳಿದ ಜಿಲ್ಲೆಗಳಲ್ಲಿ 471 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದೀಗ ಪರೀಕ್ಷೆ ನಡೆಯಲಿರುವ ಮೊದಲ ದಿನ ಶನಿವಾರದಂದೇ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪರೀಕ್ಷೆಗೆ ತೆರಳಲು ವಿದ್ಯಾರ್ಥಿಗಳಿಗೆ ಟ್ರಾಫಿಕ್ ಜಾಮ್‌ನ ಭೀತಿ ಎದುರಾಗಿದೆ. ಇದನ್ನೂ ಓದಿ: ಪುತ್ತೂರಿನ ಘಟನೆಗೆ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್ ಕಾರಣ: ಅಭಯ್ ಚಂದ್ರ ಜೈನ್

Share This Article