ಬೆಂಗಳೂರು: ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಬಿಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಎಸ್‍ವೈ ರಾಜೀನಾಮೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾಮ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯಲು ಬಿಜೆಪಿಯವರು ಪ್ರಯತ್ನಿಸಿದರೂ ಸೋತಿದ್ದಾರೆ ಎಂದರು.
Advertisement
ಮೋದಿ ಮತ್ತು ಅಮಿತ್ ಶಾ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ್ದರು. ಕೇಂದ್ರದಲ್ಲಿ ಅಧಿಕಾರ ಇದೆ ಎಂದು ಭಾವಿಸಿ ಇಲ್ಲೂ ಅಧಿಕಾರ ಏರಲು ಪ್ರಯತ್ನಿಸಿದರು. ಆದರೆ ನ್ಯಾಯಾಲಯ ಬಿಡಲಿಲ್ಲ. ಸಿಬಿಐ, ಇಡಿ, ಐಟಿಯನ್ನು ದುರಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
Advertisement
ಬಹುಮತ ಇಲ್ಲದೆ ಇದ್ದರೂ ನಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳುವ ಮೂಲಕ ಶಾಸಕರ ಖರೀದಿ ವ್ಯಾಪಾರಕ್ಕೆ ದೇಶದ ಪ್ರಧಾನಿಯೇ ಚಾಲನೆ ನೀಡಿರುವುದು ಪ್ರಜಾಪ್ರಭುತ್ವದ ಕಪ್ಪುಚುಕ್ಕೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ನಡೆದ ಪ್ರಯತ್ನದ ಪ್ರಮುಖ ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಹಾ. ಒಬ್ಬರು ಹಿಟ್ಲರ್, ಇನ್ನೊಬ್ಬರು ಗೋಬೆಲ್ಸ್. ಇವರ ಆಟ ಕರ್ನಾಟಕದ ನೆಲದಲ್ಲಿ ನಡೆಯದು ಎಂದರು.
Advertisement
ಬಿಜೆಪಿ ನಾಯಕರ ಸಾಮ-ದಾನ-ಭೇದ-ದಂಡ ಪ್ರಯೋಗಳನ್ನು ಧೈರ್ಯದಿಂದ ಎದುರಿಸಿ ಜನಾದೇಶದ ಗೌರವ ಉಳಿಸಿದ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಅಭಿನಂದನೆಗಳು. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನ ವಿರೋಧಿ ಕ್ರಮಗಳಿಂದ ಅಧಿಕಾರ ಪಡೆಯಲು ಬಿಜೆಪಿ ಮಾಡಿದ ಸಂಚು ವಿಫಲಗೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಹಾ ಅವರೆ,
ಇದು ಸ್ವಾಭಿಮಾನಿ ಕನ್ನಡಿಗರ ನಾಡು. ಇದು ಗೋವಾ, ಬಿಹಾರ, ಮಣಿಪುರ ಇಲ್ಲವೆ ಮೇಘಾಲಯ ಅಲ್ಲ.#ಪ್ರಜಾಪ್ರಭುತ್ವದವಿಜಯ
— Siddaramaiah (@siddaramaiah) May 19, 2018
Democracy has won in Karnataka!
This is a victory of the public mandate, a victory for our Institutions and the ideals enshrined in our Constitution.
My hearty Congratulations to every member of the Congress & JD(S) for sticking to the path of truth. #SatyamevaJayate
— Siddaramaiah (@siddaramaiah) May 19, 2018
Today, the politics of PM Modi stands exposed.
Without the blessings of India’s Hitler-Goebbels duo, Karnataka BJP could not have indulged in horse trading & such blatant subversion of the Constitution.
Karnataka has shown the BJP that Democracy is not for sale in India!
— Siddaramaiah (@siddaramaiah) May 19, 2018