– ಪದೇ ಪದೇ ವೀಕೆಂಡ್ ಲಾಕ್‍ಡೌನ್ ಮಾಡುವುದು ಸರಿಯಲ್ಲ
ಮಂಡ್ಯ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ನಿಯಮಗಳು ಅತೀ ಹೆಚ್ಚು ಉಲ್ಲಂಘನೆ ಆಗಿದ್ದರೆ ಅದು ಬಿಜೆಪಿ ಅವರಿಂದನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಅತೀ ಹೆಚ್ಚು ಉಲ್ಲಂಘನೆ ಮಾಡುತ್ತಿರುವುದು ಬಿಜೆಪಿ ಅವರು. ಬಿಜೆಪಿ ಅವರದ್ದು, ಡಬಲ್ ಸ್ಟ್ಯಾಂಡ್. ಹೇಳುವುದೇ ಒಂದು ಮಾಡುವುದು ಇನ್ನೊಂದು ಎಂದು ಹೇಳಿದರು. ಇದನ್ನೂ ಓದಿ: ಮಹಿಳಾ ಉದ್ದೇಶಿತ ಆಯವ್ಯಯದಡಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನ
Advertisement
Advertisement
ಉಮೇಶ್ ಕತ್ತಿ ವಿಚಾರವಾಗಿ ಮಾತನಾಡಿದ ಅವರು, ಅವನ್ಯಾರೋ ಕತ್ತಿ ಇದಾನಲ್ಲಾ ಅವನು ಮಾಸ್ಕ್ ಹಾಕೋದೇ ಇಲ್ಲ. ಕೇಳಿದ್ರೆ ಅದು ಅವರವರ ಇಷ್ಟ ಅಂತಾನೇ. ಮಂತ್ರಿಯಾದವನು ಹೀಗೆ ಹೇಳ್ತಾನೆ ಅಂದ್ರೆ, ಆತ ಮಂತ್ರಿ ಆಗಲು ಲಾಯಕ್ಕಾ? ಬೇರೆಯವರು ಮಾಸ್ಕ್ ಹಾಕದೇ ಇದ್ದರೆ ಫೈನ್ ಹಾಕ್ತಾರೆ, ಮಂತ್ರಿಗೆ ಯಾಕ್ ಫೈನ್ ಹಾಕಿಲ್ಲ ಎಂದು ಕಿಡಿಕಾರಿದರು.
Advertisement
Advertisement
ವೀಕೆಂಡ್ ಲಾಕ್‍ಡೌನ್ ಕುರಿತು ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಅಸಾಧ್ಯ. ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಮಾಡಲಿ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅವುಗಳು ಸರಿಯಾಗಿ ಪಾಲನೆಯಾಗುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೀಗೆ ವೀಕೆಂಡ್ ಲಾಕ್‍ಡೌನ್ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!