ಬೆಂಗಳೂರು: ಹಳೆಯ ತಪ್ಪುಗಳು ಪದೇ ಪದೇ ಪುನರಾವರ್ತನೆ ಆಗುತ್ತಿರುವುದೇ ಎದುರಾಳಿಗಳಿಗೆ ಚುನಾವಣೆಗೆ (Election) ಅಸ್ತ್ರ ಸಿಕ್ಕಂತಾಗಿದೆ. ಸಿದ್ದರಾಮಯ್ಯ (Siddaramaiah) ಅತಿಯಾದ ಹೇಳಿಕೆಗಳೇ ಕಾಂಗ್ರೆಸ್‌ಗೆ (Congress) ದುಬಾರಿ ಆಗುತ್ತಾ? ಎಲ್ಲದಕ್ಕೂ ಹಳ್ಳಿ ಭಾಷೆ ಹಳ್ಳಿ ಭಾಷೆ ಅಂದ್ರೆ ಎದುರಾಳಿ ಅಸ್ತ್ರವನ್ನಾಗಿ ಬಳಸುವುದಿಲ್ಲವಾ? ಎಂಬ ಪ್ರಶ್ನೆಗಳೆದ್ದಿವೆ. ಇನ್ನು 2023ರ ಚುನಾವಣೆಯ ಅಸಲಿ ಅಖಾಡಕ್ಕೂ ಮುನ್ನವೇ ಸಿದ್ದು ಲೂಸ್ ಟಾಕ್ ಏಕೆ? ಪದೇ ಪದೇ ಲೂಸ್ ಟಾಕ್ ರಿಪೀಟ್ ಮಾಡೋದು ಪಾಸಿಂಗ್ ಟಾಕೋ? ಎಲೆಕ್ಷನ್ ಟ್ರಿಕ್ಸೋ? ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
Advertisement
ನರೇಂದ್ರ ಮೋದಿ ನರಹಂತಕ: 2013ರ ಸೆಪ್ಟೆಂಬರ್‌ನಲ್ಲಿ ನರಹಂತಕ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದರು. ಬಿಜೆಪಿ ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿತ್ತು. ಆ ವೇಳೆ ಬಿಜೆಪಿ ನಾಯಕರು ಎಲ್ಲ ಪ್ರಚಾರ ಸಭೆಗಳಲ್ಲಿ ಹಿಂದೂ ಅಸ್ತ್ರವನ್ನಾಗಿ ಬಳಸಿದ್ದರು.
Advertisement
Advertisement
ಅವರಪ್ಪನಾಣೆ ಸಿಎಂ ಆಗಲ್ಲ: ಆಗ 2018ರಲ್ಲಿ ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದರು. ಅಲ್ಲದೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದ್ದರು. ಇದನ್ನೇ ಜೆಡಿಎಸ್ ದೇವೇಗೌಡರ ಎಮೋಶನಲ್ ಕಾರ್ಡ್, ಜಾತಿ ಕಾರ್ಡ್ ಪ್ಲೇ ಮಾಡಿದ್ದರು. ಜೆಡಿಎಸ್ ಜಾತಿ ಅಸ್ತ್ರವನ್ನಾಗಿ ಬಳಸಿಕೊಂಡ ಪರಿಣಾಮ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೊಡೆತ ತಿಂದಿತ್ತು.
Advertisement
ಬೊಮ್ಮಾಯಿ ನಾಯಿಮರಿ: ಈಗ ಮತ್ತೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ನಾಯಿಮರಿ ಎಂದು ಸಿದ್ದರಾಮಯ್ಯ ಹೇಳಿಕೆ ಕೊಟ್ಟು ಸಮರ್ಥನೆಗೆ ಇಳಿದಿದ್ದಾರೆ. 2023ರ ಜನವರಿ 3ರಂದು ಬಳ್ಳಾರಿ ಹಗರಿಬೊಮ್ಮನಹಳ್ಳಿಯಲ್ಲಿ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ನಾಯಕರ ದಂಡು ಮುಗಿಬಿದ್ದಿದ್ದಾರೆ. ನಾನು ಜನರ ನಿಯತ್ತಿನ ನಾಯಿ ಎಂದು ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 2023ರ ಚುನಾವಣಾ ಆರಂಭಿಕ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!
ಹಾಗಾದರೆ ಸಿದ್ದರಾಮಯ್ಯ ಲೂಸ್ ಟಾಕ್‌ನಿಂದ ಕಾಂಗ್ರೆಸ್‌ಗೆ ನಷ್ಟನಾ? ಬಿಜೆಪಿಗೆ ಲಾಭನಾ? ಎಂಬ ಲೆಕ್ಕಚಾರ ಶುರುವಾಗಿದ್ದು, ಮುಂದಿನ ಮೂರು ತಿಂಗಳ ಚುನಾವಣಾ ಮಾತಿನ ವರಸೆಗಳು ಹೀಗೆ ಮುಂದುವರಿಯುತ್ತಾ? ಎಂಬ ಕುತೂಹಲ ಹುಟ್ಟುಹಾಕಿದೆ. ಇದನ್ನೂ ಓದಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ನಟಿಯೊಬ್ಬರ ಗುರುತರ ಆರೋಪ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k