ಬೆಂಗಳೂರು: ಆಕ್ಸಿಜನ್ ಕೊಡುವುದಕ್ಕೆ ಆಗದವರು ಇಂದು ಯೋಗ ಮಾಡಲು ಬಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. 19/20 ರಲ್ಲಿ ಬಾರಿ ಪ್ರವಾಹ ಬಂದಿತ್ತು. ಆಗ ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ನೊಂದ ಜನರಿಗೆ ಸಾಂತ್ವನ ಹೇಳಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಲಿಲ್ಲ. ಈಗ ಅವರಿಗೆ ರಾಜ್ಯದ ನೆನಪಾಗಿದೆ. ಆಕ್ಸಿಜನ್ ಕೊಡುವುದಕ್ಕೆ ಆಗದವರು. ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಮಾತನಾಡಬೇಕು. 40% ಕಮೀಷನ್ ಬಗ್ಗೆ ದೂರು ಕೊಟ್ಟರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬ್ ಅರ್ಬನ್ ಯೋಜನೆ ಹೇಳುತ್ತಲೇ ಬರುತ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳುತ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಕಿಡಿಕಾರಿದ್ದಾರೆ.
Advertisement
Advertisement
ನಿರುದ್ಯೋಗದ ಬಗ್ಗೆ ಇಲ್ಲಿ ಮಾತನಾಡಲ್ಲ. ಬೆಲೆ ಏರಿಕೆ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಈಗ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ. ಕೋವಿಡ್ ವೇಳೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದ ಮೇಲೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದರೂ ಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಮೇಲೆ ಕೊಟ್ಟರು. ಆಕ್ಸಿಜನ್ ಇಲ್ಲದೇ ಸಾವಿರಾರು ಜನ ಸತ್ತರು. ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದ್ದರು. ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ತರು. ಇದಕ್ಕೆಲ್ಲ ಯಾರು ಕಾರಣ ಇದೇ ಮೋದಿಯವರು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಗ್ನಿಪಥವನ್ನು ರಾಜಕೀಯಮಯ ಮಾಡುತ್ತಿದೆ: ಬಿ.ಸಿ.ಪಾಟೀಲ್
Advertisement
ದೇಶದಲ್ಲಿ ನಿರುದ್ಯೋಗ ಇನ್ನೂ ಹೆಚ್ಚುತ್ತಿದೆ. ಯುವಕರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಹಿಂಸಾತ್ಮಕ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಆದರೆ ನ್ಯಾಯಯುತ ಹೋರಾಟಕ್ಕೆ ಬೆಂಬಲವಿದೆ. ಕೇಂದ್ರದ ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷದವರೆಗೆ ಸೇರಿಸಿಕೊಳ್ಳುತ್ತೇವೆ ಅಂತಾರೆ. ಆದರೆ ನಾಲ್ಕು ವರ್ಷದ ನಂತರ ಪಿಂಚಣಿ ಸಿಗಲ್ಲ. ಹೀಗಾಗಿ ಮುಂದೆ ನಮ್ಮ ಕಥೆ ಹೇಗೆ ಅಂತ ಜನರು ಕೇಳುತ್ತಿದ್ದಾರೆ. ದೇಶದ ಯುವಕರು ಕೇಳುತ್ತಿದ್ದಾರೆ. ಇವರು ಯೋಜನೆ ಬಗ್ಗೆ ಹಠ ಹಿಡಿದು ಕೂತಿದ್ದೇಕೆ? ನಾಲ್ಕು ವರ್ಷದ ನಂತರ ತೆಗೆದುಬಿಡುತ್ತಾರೆ. ಆ ನಂತರ ಅವರಿಗೆ ಕೆಲಸ ಕೊಡಲ್ಲ. ಸೇನೆಗೆ ಸೇರುವವರು ಏನು ಮಾಡಬೇಕು. ನಾಲ್ಕು ವರ್ಷ ಮಾತ್ರ ಕೊಡುತ್ತಾರೆ. 6 ತಿಂಗಳು ತರಬೇತಿಗೆ ಮುಗಿಯುತ್ತದೆ. ಉಳಿಯುವುದು ಮೂರುವರೆ ವರ್ಷ ಮಾತ್ರ. ಉದ್ಯೋಗಿಗಳು ಆಮೇಲೆ ಏನು ಮಾಡಬೇಕು. ರಿಟೈರ್ಡ್ ಬೆನಿಫಿಟ್ ಏನೂ ಸಿಗಲ್ಲ. ಅದಕ್ಕೆ ಹಠ ಹಿಡಿಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡುತ್ತಿದ್ದಾರೆ. ಇದನ್ನು ಜಾರಿಗೆ ತಂದಿದ್ದು ಯಾರು? ನಾವು, ನಮ್ಮ ಅವಧಿಯಲ್ಲೇ ಜಮೀನು ಕೊಟ್ಟು ತಂದಿದ್ದು. ಆದರೆ ಈಗ ಅದನ್ನು ಅವರು ಉದ್ಘಾಟನೆ ಮಾಡುತ್ತಿದ್ದಾರೆ. ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು? ನಾನು, ನಾನು ಅಂತ ಪ್ರತಾಪ್ ಸಿಂಹ ಓಡಾಡುತ್ತಿದ್ದಾರೆ. ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್ ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗುತ್ತಿದೆ. ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್‍ಗೆ ಕರೆ- 150ಕ್ಕೂ ಅಧಿಕ ಯುವಕರು ಪೊಲೀಸರು ವಶಕ್ಕೆ