Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

Districts

ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

Public TV
Last updated: July 19, 2025 4:30 pm
Public TV
Share
3 Min Read
Siddaramaiah 03
SHARE

– ಮೋದಿ ದೇಶದ 10% ಜನರಿಗೆ ಕೆಲಸ ಮಾಡ್ತಾರೆ, 90% ಜನ ಲೆಕ್ಕಕ್ಕಿಲ್ಲ
– ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ ಟೀಕಿಸಲು ನಾಚಿಕೆ ಆಗಬೇಕು ಎಂದ ಸಿಎಂ

ಮೈಸೂರು: ಜೆಡಿಎಸ್ – ಬಿಜೆಪಿ ಸಂಸದರಿಗೆ ಮೋದಿ (Narendra Modi) ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೀವ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ (Mysuru) ಸಾಧನಾ ಸಮಾವೇಶವನ್ನುದ್ದೇಶಿಸಿ ಮುಖ್ಯಭಾಷಣ ಮಾಡಿದ ಸಿಎಂ, ಬಿಜೆಪಿ-ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ, ಜೆಡಿಎಸ್ ಮುಖಂಡರೂ (BJP JDS Leaders) ಈ ವೇದಿಕೆಯಲ್ಲಿ ಇರಬೇಕಿತ್ತು. ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ ಅಂತ ಜೆಡಿಎಸ್ – ಬಿಜೆಪಿಗೆ ಬಹಿರಂಗ ಸವಾಲು ಹಾಕಿದರು. ಇದನ್ನೂ ಓದಿ: ಮನೆಯಲ್ಲಿ ಕೂತಿರೋರಿಗೆಲ್ಲ ವೆಲ್‌ಕಮ್‌ ಮಾಡೋಕಾಗಲ್ಲ – ಡಿಕೆಶಿ ಹೆಸರನ್ನೇ ಹೇಳದ ಸಿಎಂ

ಬಿಜೆಪಿ, ಜೆಡಿಎಸ್‌ಗೆ ಇರುವಷ್ಟು ಮತ್ಸರ ಇರಬಾರದು
ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್‌ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹಣಕಾಸು ಸಚಿವರಾದಾಗ ಲಕ್ಷ್ಮಿ ಕುಂಟಾಗಿ ಖಜಾನೆಯಲ್ಲಿರ‍್ತಾಳೆ: ಮಲ್ಲಿಕಾರ್ಜುನ ಖರ್ಗೆ

ಜೆಡಿಎಸ್‌ ವೀಕ್‌ ಆಗಿ ಬಿಜೆಪಿ ಜೊತೆ ಸೇರಿದೆ
ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 58 ಸ್ಥಾನ ಗೆದ್ದಿದ್ದೇವು. ಈಗ ಜೆಡಿಎಸ್ ಗೆದ್ದಿರೋದು ಎಷ್ಟು ದೇವೇಗೌಡರೇ? ಜೆಡಿಎಸ್ ಈಗ ಗೆದ್ದಿರೋದು 18 ಸ್ಥಾನ ಮಾತ್ರ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ವೀಕ್ ಆಗಿದೆ. ಹೀಗಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್, ಬಿಜೆಪಿ ಈ ರಾಜ್ಯದಲ್ಲಿ ಜನರ ಪ್ರೀತಿ ಉಳಿಸಿ ಕೊಂಡಿಲ್ಲ ಎಂದು ತಿವಿದರು. ಇದನ್ನೂ ಓದಿ: ನಮ್ಮ ಸರ್ಕಾರ ದೇವರ ಮನೆಯಿದ್ದಂತೆ, ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ: ಡಿಕೆಶಿ

ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ
ಜೆಡಿಎಸ್ – ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ. ಬಿಜೆಪಿ – ಜೆಡಿಎಸ್‌ಗೆ ನಾಚಿಕೆ ಆಗಲ್ವಾ? ನಾವು ಜೆಡಿಎಸ್ – ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ ಟೀಕಿಸಲು ಅವರಿಗೆ ನಾಚಿಕೆ ಆಗಬೇಕು. ನಮ್ಮ ಗ್ಯಾರಂಟಿಯಿಂದ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿಯಾಗಿದ್ದಾರೆ. ಇದೇ ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ, ಈ ಹೊಟ್ಟೆ ಉರಿ ಬಿಡಿ. ರಾಜಕೀಯವಾಗಿ ಏನಾದ್ರೂ ಮಾತನಾಡಿ, ನಾನು ತಪ್ಪು ಮಾಡಿದ್ದರೆ ದಾಖಲೆ ಸಮೇತ ಹೇಳಿ ಎಂದು ಹೇಳಿದರು. ಇದನ್ನೂ ಓದಿ: Kolar | ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ – ಹಾಲಿನಲ್ಲಿ ಕೆಮಿಕಲ್ ಅಂಶ ಪತ್ತೆ

ಮೋದಿ ದೇಶದ 10% ಜನರಿಗೆ ಮಾತ್ರ ಕೆಲಸ ಮಾಡೋದು
ಮುಂದುವರಿದು… ನರೇಂದ್ರ ಮೋದಿ ಈ ದೇಶದ 10% ಜನರಿಗೆ ಮಾತ್ರ ಕೆಲಸ ಮಾಡೋದು, ಉಳಿದ 90% ಅವರಿಗೆ ಲೆಕ್ಕ ಇಲ್ಲ. ಆದ್ರೆ ಕಾಂಗ್ರೆಸ್ ಬಡವರು, ದಲಿತರ ಪರ ಕೆಲಸ ಮಾಡುವ ಪಕ್ಷ. ಬುದ್ಧ, ಬಸವ, ಅಂಬೇಡ್ಕರ್ ತತ್ವದಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದ್ರೆ ಆರ್‌ಎಸ್‌ಎಸ್‌, ಬಿಜೆಪಿ ಮನುವಾದಿಗಳು, ಸಂವಿಧಾನ ವಿರೋಧಿಗಳು ಅಂತ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಶಾಶ್ವತ
ಇದೇ ವೇಳೆ ಗ್ಯಾರಂಟಿ ನಿಲ್ಲಿಸುತ್ತೆ ಕಾಂಗ್ರೆಸ್‌ ಎನ್ನುವ ವಿಪಕ್ಷಗಳ ಆರೋಪ ಕುರಿತು ಮಾತನಾಡಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಬೇರೆ ಬೇರೆ ರಾಜ್ಯದಲ್ಲಿ ಕಾಪಿ ಮಾಡ್ತಿದೆ. ಮೋದಿ ಜೀ ನಿಮಗೆ ನಾಚಿಕೆ ಆಗಲ್ವಾ? ನಮ್ಮ ಗ್ಯಾರಂಟಿ ಟೀಕಿಸಿ ಈಗ ಅದನ್ನೆ ಎಲ್ಲಾ ಕಡೆ ಕೊಡುತ್ತಿದ್ದಿರಿ ಎಂದು ಲೇವಡಿ ಮಾಡಿದರು.

TAGGED:bjpcongressjdsmysurunarendra modisadhana samaveshasiddaramaiahಕಾಂಗ್ರೆಸ್ಜೆಡಿಎಸ್ನರೇಂದ್ರ ಮೋದಿಬಿಜೆಪಿಮೈಸೂರುಸಾಧನಾ ಸಮಾವೇಶಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Abhishek Sharma
Cricket

ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸೊನ್ನೆ – 7 ಇನ್ನಿಂಗ್ಸ್‌ ಪೈಕಿ 5 ರಲ್ಲಿ ಶೂನ್ಯಕ್ಕೆ ಅಭಿಷೇಕ್‌ ಔಟ್‌

Public TV
By Public TV
10 minutes ago
ramzan namaz
Latest

ರಂಜಾನ್ | ಇಡೀ ತಿಂಗಳು ಸಂಜೆ 4ಕ್ಕೆ ಕಚೇರಿಯಿಂದ ತೆರಳಲು ಮುಸ್ಲಿಂ ನೌಕರರಿಗೆ ಅವಕಾಶ: ತೆಲಂಗಾಣ ಸರ್ಕಾರ

Public TV
By Public TV
25 minutes ago
Suraj Revanna 5
Bengaluru City

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಆರೋಪ ಮುಕ್ತಗೊಳಿಸುವಂತೆ ಸೂರಜ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ

Public TV
By Public TV
48 minutes ago
India AI Impact Summit PM Narendra Modi meets Google CEO discusses AI collaborations
Latest

AI ಸಹಯೋಗದ ಬಗ್ಗೆ ಸುಂದರ್‌ ಪಿಚೈ ಜೊತೆ ಮೋದಿ ಮಾತುಕತೆ

Public TV
By Public TV
51 minutes ago
Prime Minister Modi inaugurates India AI Impact Expo 2026 at Bharat Mandapam
Latest

AI Impact Summit 2026 – ಜಾಗತಿಕ ಶೃಂಗಕ್ಕೆ ಮೋದಿ ಚಾಲನೆ

Public TV
By Public TV
1 hour ago
Drone Soccer Arena
Latest

ರೋಬೋಟ್ ಡಾಗ್ ಆಯ್ತು, ಈಗ ಸಾಕರ್ ಡ್ರೋನ್ – ಮತ್ತೊಂದು ವಿವಾದದಲ್ಲಿ ಗಲ್ಗೋಟಿಯಾ ವಿವಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?