ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಮಧ್ಯ ವಾಕ್ ಸಮರ ಮುಂದುವರಿದಿದೆ. ಈ ಬಾರಿ ಸಿದ್ದರಾಮಯ್ಯ ಅವರು, ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವಳಿಗೆ ಇದೆಯೇ ಎಂದು ಪ್ರಶ್ನಿಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ಅವಳ ಹಲ್ಲು ಏನು ಬಿಗಿಯಾಗಿದೆಯಾ? ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಅವಳು ಸೋತಿಲ್ಲವೇ? ಹೀಗಿರುವಾಗ ನನ್ನ ಕುರಿತಾಗಿ ಮಾತನಾಡುವ ನೈತಿಕತೆ ಅವಳಿಗಿಲ್ಲ ಎಂದ ಅವರು, ಬಿಜೆಪಿಯವರು ಒಣ ಜಂಭ ಬಿಡಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಅಂತ ಹೇಳಿದರು. ಇದನ್ನೂ ಓದಿ: ಆ ಯಮ್ಮ ಹ್ಯೂಮನ್ ಬಿಯಿಂಗ್ ಹೌದೊ ಅಲ್ಲವೋ ನೀವೇ ಹೇಳಿ: ಕರಂದ್ಲಾಜೆಗೆ ಸಿದ್ದರಾಮಯ್ಯ ಟಾಂಗ್
Advertisement
Advertisement
ಶೋಭಾ ಕರಂದ್ಲಾಜೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ, ವೋಟ್‍ಗಳು ಯಡಿಯೂರಪ್ಪ ಅವರ ಜೇಬಿನಲ್ಲಿ ಇಲ್ಲ. ಈಗಾಗಲೇ ಅವರು ನೀಡಿದ್ದ ಹಲವು ಡೆಡ್ ಲೈನ್‍ಗಳು ಮುಗಿದಿವೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಇನ್ನಾದರೂ ಭ್ರಮೆಯಿಂದ ಹೊರಬನ್ನಿ- ಬಿಎಸ್‍ವೈಗೆ ಸಿದ್ದರಾಮಯ್ಯ ಟಾಂಗ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
https://youtu.be/JtQJDl2Yv0s