ಬೆಂಗಳೂರು: ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಕೆರಗೋಡಿನಲ್ಲಿ (Keragodu) ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN Ashwath Narayan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆರಗೋಡಿನ ಗ್ರಾಮಸ್ಥರು ಸ್ವಂತ ಹಣದಲ್ಲಿ ಧ್ವಜಸ್ತಂಭ ನಿಲ್ಲಿಸಿದ್ದಾರೆ. ಪಂಚಾಯತ್‌ನಿಂದ ನಿರ್ಣಯ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ, ಭಗವಾನ್ ಧ್ವಜ ಹಾರಿಸಲು ಅನುಮತಿ ಪಡೆದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಯಾವ ಕಡೆಯೂ ಭಗವಾನ್ ಧ್ವಜ ಹಾಕಿಲ್ಲ. ಈ ಸರ್ಕಾರಕ್ಕೆ ಇದೊಂದೆ ಧ್ವಜಸ್ತಂಭ ಕಂಡಿದ್ದಾ? ಭಗವಾನ್ ಧ್ವಜ ಹಾರಿಸಿದ್ದು ಕಾನೂನಿನಲ್ಲಿ ತಪ್ಪು ಇದ್ದರೆ ನೋಟಿಸ್ ಕೊಡಬಹುದಿತ್ತು. ಆದರೆ ಇವರು ಏಕಾಏಕಿ ಬಂದು ಭಗವಾನ್ ಧ್ವಜ ಇಳಿಸಿದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ
ರಾಷ್ಟ್ರಧ್ವಜ ಹಾರಾಟ ಮಾಡಲು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ. ಎಸಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಎಸಿ ವಿರುದ್ಧ ದೂರು ಕೊಟ್ಟಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ಆಗಬೇಕು. ಎಫ್‌ಐಆರ್ ಹಾಕಬೇಕು. ಎಸಿ ವಿರುದ್ಧ ಕ್ರಮ ಆಗಬೇಕು. ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: I am a Hindu, ಆದ್ರೆ ಬಿಜೆಪಿಯವರು ಚುನಾವಣೆಗೋಸ್ಕರ ಪ್ರಚೋದನೆ ಕೊಡ್ತಿದ್ದಾರೆ: ಸಿಎಂ ಸಿಡಿಮಿಡಿ
ಭಗವಾನ್ ಧ್ವಜ ಹಾರಾಟ ಬಿಜೆಪಿ ಅವರ ರಾಜಕೀಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕನ್ಫ್ಯೂಸ್ ಆಗಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಮಾಡೋದ್ರಲ್ಲಿ ನಿಸ್ಸೀಮರು. ಮಂಡ್ಯದ ಶಾಸಕರು ಯಾರು ಕಾಂಗ್ರೆಸ್ ಶಾಸಕರೇ ಅಲ್ಲವಾ? ಅಲ್ಲಿನ ಜನರೇ ಹಣ ಸಂಗ್ರಹ ಮಾಡಿ ಧ್ವಜ ಸ್ಥಾಪನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಜೀವನದಲ್ಲಿ ಎರಡು ರೂಪಾಯಿ ಖರ್ಚು ಮಾಡಿಲ್ಲ. ಜನರೇ ದುಡ್ಡು ಹಾಕಿ ಮಾಡಿದ್ದಾರೆ. ಈಗ ಅದಕ್ಕೂ ಇವರು ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಭಾವನೆಗಳನ್ನು ಗೌರವಿಸಬೇಕು ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ ಮಹಿಳಾ ರಾಷ್ಟ್ರಪತಿಗೆ ಕೊಡೋ ಗೌರವ ಇದೇನಾ – ಪ್ರಹ್ಲಾದ್ ಜೋಶಿ ಪ್ರಶ್ನೆ
ಸಿದ್ದರಾಮಯ್ಯಗೆ ಜನ ಆಡಳಿತ ಮಾಡಲು ಅಧಿಕಾರ ಕೊಟ್ಟಿದ್ದಾರೆ. ಆದರೆ ಅವರು ಆಡಳಿತ ಬಿಟ್ಟು ಬೇರೆ ಎಲ್ಲಾ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ರಾಜಕೀಯ ಮಾಡೋದು ಬೇಡ. ಸಿದ್ದರಾಮಯ್ಯ ಅವರು ರಾಜಕೀಯ ಬಿಟ್ಟು ಜನರ ಭಾವನೆಗೆ ಬೆಲೆ ಕೊಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ