ನವದೆಹಲಿ: ಶ್ರೀರಾಮ ಆರ್ಯನೋ, ದ್ರಾವಿಡನೋ ಎನ್ನುವುದು ಸಿದ್ದರಾಮಯ್ಯ ಅವರು ಹೇಳಬೇಕು. ಒಂದು ವೇಳೆ ಶ್ರೀರಾಮ ಆರ್ಯನಾದರೇ ದ್ರಾವಿಡರಾಗಿರುವ ಸಿದ್ದರಾಮಯ್ಯ ತಮ್ಮ ಹೆಸರಿನಲ್ಲಿ ರಾಮನನ್ನು ಏಕೆ ಸೇರಿಸಿಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಆರ್ಯ ದ್ರಾವಿಡ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ.ರವಿ ಅವರು, ಸಿದ್ದರಾಮಯ್ಯ ಅವರು ಸತ್ತು ಹೋಗಿದ್ದ ವಿಷಯಕ್ಕೆ ಜೀವ ತುಂಬಿದ್ದಾರೆ. ಆರ್ಯ ದ್ರಾವಿಡ ಎನ್ನುವ ವಾದವನ್ನು ಐರಿಷ್ ಪಾದ್ರಿ ಮಂಡಿಸಿದ್ದರು. ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದರು. ಇದನ್ನೂ ಓದಿ: ಪ್ರೇಕ್ಷಕ ಮೆಚ್ಚಿದ ‘ವೀಲ್‍ಚೇರ್ ರೋಮಿಯೋ’ಗೆ ಕಿಚ್ಚನ ಬೆಸ್ಟ್ ವಿಶ್
Advertisement
Advertisement
ಉತ್ತರ ಹಾಗೂ ದಕ್ಷಿಣ ಭಾರತದವರ ಡಿಎನ್‍ಎ ಒಂದೇ. ಯಾವುದನ್ನು ಅದುಮಿಡಲಿಕ್ಕೆ ಸಿದ್ದರಾಮಯ್ಯ ಅವರು ಬಯಸುತ್ತಿದ್ದಾರೆ. ಬಣ್ಣ, ಜಾತಿ ಇಟ್ಟುಕೊಂಡು ವಾದ ಮಾಡಲು ಆಗುತ್ತೋ? ಯಾವ ಆಧಾರ ಇಟ್ಟುಕೊಂಡು ಆರ್ಯ ದ್ರಾವಿಡ ವಾದ ಮಾಡುತ್ತಿದ್ದಿರಿ? ಎಂದು ಪ್ರಶ್ನೆ ಮಾಡಿದರು.
Advertisement
ನಿಮ್ಮ ದೃಷ್ಟಿಯಲ್ಲಿ ವಾಲ್ಮೀಕಿ ಯಾರು? ಮಹಾಭಾರತ ರಚಿಸಿದ ವ್ಯಾಸ ಯಾರು? ಚಂದ್ರಗುಪ್ತ ಮೌರ್ಯನನ್ನು ಯಾರಿಗೆ ಹೋಲಿಸ್ತಿರಿ? ಕಾಳಿದಾಸ, ಅಹಲ್ಯಬಾಯಿ ಹೋಳ್ಕರ್ ಅವರನ್ನು ಎಲ್ಲಿಗೆ ಸೇರಿಸ್ತಿರಿ? ನಿಮ್ಮದು ಅರೆಬರೆ ತಿಳುವಳಿಕೆ. ಸೀತೆ ರಾಮನನ್ನು ಆರ್ಯ ಎಂದು ಕರೆದಿದ್ದರು, ಆರ್ಯ ಎಂದರೆ ಒಡೆಯ ಎಂದರ್ಥ ಎಂದು ವಾಗ್ದಾಳಿ ಮಾಡಿದರು.
Advertisement
ಒಡೆದು ಆಳುವ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಉತ್ತರ, ದಕ್ಷಿಣದಲ್ಲಿ ಶಿವನನ್ನು, ವಿಷ್ಣುವನ್ನು ಪೂಜೆಸುತ್ತಾರೆ. ರಾಮ, ಶಿವ, ಕೃಷ್ಣ ಕಪ್ಪು ಅವರನ್ನು ಯಾರಿಗೆ ಹೋಲಿಸ್ತಿರಿ? ಪಕ್ಷದೊಳಗೆ ಆಗುತ್ತಿರುವ ಪೈಪೋಟಿಯನ್ನು ಎದುರಿಸಲಾಗುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಕರ್ನಾಟಕದ ಮರ್ಯಾದೆ ಕಳೆಯೋ ಕೆಲಸ ಮಾಡಬಾರದು. ಅವರನ್ನು ನೋಡಿ ಯಾವುದೋ ಮೆಂಟಲ್ ಗಿರಾಕಿ ಎಂದು ಜನರು ಭಾವಿಸುತ್ತಾರೆ. ಯಾರೋ ತಲೆ ತಿರುಕರು ಹೇಳಿಕೊಟ್ಟಿದ್ದನ್ನು ಹೇಳಬೇಡಿ. ನಿಮ್ಮ ಹೇಳಿಕೆಗಳಿಗೆ ಆಧಾರ ಪ್ರಬುದ್ಧತೆ ಇರಬೇಕು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ವಿಚಿತ್ರ ಮದುವೆ: ಹಾವನ್ನೆ ಹಾರ ಮಾಡಿಕೊಂಡ ವಧು-ವರ
ಆರ್‌ಎಸ್‍ಎಸ್ ಸಂಸ್ಕಾರ ಕೊಡುವ ಕೆಲಸ ಮಾಡುತ್ತೆ. ಜನರು ಪ್ರೇರಣೆ ಪಡೆಯುತ್ತಿದ್ದಾರೆ. ಆರ್‌ಎಸ್‍ಎಸ್ ಬಗ್ಗೆ ನೆಹರು ಅವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ, ರಿಪಬ್ಲಿಕ್ ಡೇ ಪೆರೇಡ್‍ನಲ್ಲಿ ಅವಕಾಶ ನೀಡಲಾಗಿತ್ತು. ನೂರಾರು ವಿದ್ಯಾಸಂಸ್ಥೆಗಳನ್ನು ಕಟ್ಟಿ ವಿದ್ಯೆ ನೀಡುತ್ತಿದೆ. ದೇಶದ ಪ್ರಧಾನಿ, ರಾಷ್ಟ್ರಪತಿ ಆರ್‌ಎಸ್‍ಎಸ್‍ನಿಂದ ಬಂದವರು. ನಾನು ಆರ್‌ಎಸ್‍ಎಸ್ ಸ್ವಯಂ ಸೇವಕ. ಕೆಟ್ಟದ್ದು ಇದ್ದಿದ್ದರೆ ಅದು ನನ್ನ ವೈಯಕ್ತಿಕ, ನಾನು ಇಂದು ಒಳ್ಳೆಯದು ಕಲಿತಿರುವುದು ಸಂಘದಿಂದ ಎಂದು ತಿರುಗೇಟು ನೀಡಿದರು.