ಬಾಗಲಕೋಟೆ: ನನ್ನ ಜೊತೆ ಬಿಜೆಪಿ, ಜೆಡಿಎಸ್‍ನ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಹೇಳುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಜೊತೆ ಬಿಜೆಪಿ, ಜೆಡಿಎಸ್‍ನ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಅವರ ಹೆಸರು ಹೇಳುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಬಿಜೆಪಿಗೆ ವಲಸೆ ಹೋದವರು ಕಾಂಗ್ರೆಸ್‍ಗೆ ವಾಪಸ್ ಬರುತ್ತಾರಾ ಎಂಬ ಪ್ರಶ್ನೆಗೆ, ನೋಡಪ್ಪಾ ನಮಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇರುವವರು ಬೇಕು. ಅನ್ ಕಂಡೀಷನಲ್ ಆಗಿ ಬರಬೇಕು. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿಕೊಳ್ಳಬೇಕು. ಒಪ್ಪಿಕೊಂಡು ಬಂದವರಿಗೆ ಸ್ವಾಗತ ಎಂದಿದ್ದಾರೆ.
Advertisement
Advertisement
ಪಂಚರಾಜ್ಯ ಚುನಾವಣೆ: ಆ ಬಗ್ಗೆ ನನಗೇನೂ ಗೊತ್ತಿಲ್ಲ. ಗೊತ್ತಿಲ್ಲದೆ ಮಾತಾಡಬಾರದು. ಅಲ್ಲಿ ನಾನು ಹೋಗಿಲ್ಲ. ಸುಮ್ಮನೆ ಊಹೆ ಮೇಲೆ ಮಾಧ್ಯಮದ ಆಧಾರದ ಮೇಲೆ ಮಾತಾಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್
Advertisement
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ : ಎಲ್ಲಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿದ್ದರೂ ಸಹ, ಉಸ್ತುವಾರಿ ಸಚಿವರಿಲ್ಲದೇ ಇರುವ ರೀತಿ ಇದ್ದಾರೆ. ಅವರು ಏನು ಕೆಲಸ ಮಾಡುತ್ತಿಲ್ಲ. ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಉಸ್ತುವಾರಿ ಸಚಿವರಿಂದ ಜನರ ಸಮಸ್ಯೆಗಳು ಬಗೆಹರೆಯುತ್ತಿಲ್ಲ. ಅಲ್ಲಿಯ ಆಡಳಿತ ಅಭಿವೃದ್ಧಿಯಾಗಿಲ್ಲ. ಇವರ ಮಾತು ಯಾರೂ ಕೇಳಲ್ಲ. ಯಾಕೆಂದರೆ ಎಲ್ಲ ಕಮೀಷನ್ ಮೇಲೆ ನಿಂತು ಬಿಟ್ಟಿದ್ದಾರಲ್ಲ. ಹೀಗಾಗಿ ಅವರ ಮಾತು ಯಾರೂ ಕೇಳಲ್ಲ ಎಂದು ಹೇಳಿದರು. ಇದೇ ವೇಳೆ ಖಾಲಿ ಇರುವ ನಾಲ್ಕು ಸಚಿವ ಸ್ಥಾನ ತುಂಬುವ ವಿಚಾರವಾಗಿ, ನಾಲ್ಕಲ್ಲ, ಐದು, ಅವರ ಪಕ್ಷದ್ದು ನಾನೇಕೆ ಮಾತನಾಡಲಿ ಎಂದು ಮಾತಿನಿಂದ ಜಾರಿಕೊಂಡಿದ್ದಾರೆ.
Advertisement
ಬಾದಾಮಿಯಿಂದಲೇ ಸ್ಪರ್ಧಿಸಿ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ ಎಂಬ ಬೆಂಬಲಿಗರ ಒತ್ತಾಯದ ಬಗ್ಗೆ ಮಾತನಾಡಿದ ಅವರು, ಅದಕ್ಕೆ ಇನ್ನು ಒಂದೂಕಾಲು ವರ್ಷವಿದೆ ಅದನ್ನು ಮುಂದೆ ನೋಡೋಣ. ನಾನು ಈಗಲೇ ಅದರ ಬಗ್ಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಐದಾರು ಕ್ಷೇತ್ರದವರು ನನ್ನನ್ನು ಕರೆಯುತ್ತಿದ್ದಾರೆ. ಅವರನ್ನೆಲ್ಲಾ ಕೇಳಿಕೊಂಡು ಚುನಾವಣೆ ಹತ್ತಿರ ಬಂದಾಗ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೈಲಿನಲ್ಲೇ ವೈಭೋಗ – ಜೆಸಿಬಿ ನಾರಾಯಣನ ರಾಯಲ್ ಜೈಲ್ ಲೈಫ್ ಸ್ಟೋರಿ