ಬಾಗಲಕೋಟೆ: ಸತತ ಮೂರನೇ ದಿನವೂ ಕ್ಷೇತ್ರ ಪ್ರವಾಸದಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾರು ಸಂಕೋಚ ಪಡದೆ ತಮ್ಮ ಬಳಿ ಊರಿನ ಸಮಸ್ಯೆ ಹೇಳಿಕೊಳ್ಳಬಹುದು. ಚಡ್ಡಿ ಹಾಕೋರಿಂದ ಹಿಡಿದು ಪ್ಯಾಂಟ್, ಕಚ್ಚೆ ತೊಡುವವರು ನನ್ನ ಕಚೇರಿಗೆ ಬರಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ.
ಕ್ಷೇತ್ರ ಪ್ರವಾಸದ ವೇಳೆ ಮಾತನಾಡಿದ ಅವರು, ಸದ್ಯ ನಾನು ಈ ಕ್ಷೇತ್ರದ ಪ್ರತಿನಿಧಿ. ಮತ ಹಾಕಿದವರು ಹಾಕದೇ ಇರುವವರು ಸಹ ತಮ್ಮ ಕೆಲಸಕ್ಕಾಗಿ ನನ್ನ ಬಳಿ ಬರಬಹುದು. ಸದ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರವಾಸ ನಡೆಸುತ್ತಿದ್ದು. ಮುಂದಿನ ದಿನಗಳಲ್ಲಿ ಹಳ್ಳಿಗೆ ಭೇಟಿ ನೀಡುತ್ತೇನೆ ಎಂದರು.
ಕ್ಷೇತ್ರ ಪ್ರವಾಸದ ಭಾಗವಾಗಿ ಮಂಗಳೂರು ಗ್ರಾಮ ಪಂಚಾಯಿತಿ, ಹೊಸೂರು ಗ್ರಾಮಕ್ಕೆ ಮಾಜಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರದ ಕುರಿತು ಮಾತನಾಡಿ, ಈ ಬಾರಿ ಆತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಅದಕ್ಕಾಗಿ ಜೆಡಿ ಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆ ಮಾಡಲಾಯಿತು. ನಮ್ಮ ಸರ್ಕಾರದ ವೇಳೆ ಜಾರಿಗೆ ಮಾಡಲಾಗಿರುವ ಯೋಜನೆಗಳನ್ನು ನಿಲ್ಲಿಸದೆ ಮುಂದುವರೆಸಲಾಗುವುದು. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಿದ್ದು, ನಮ್ಮ ಎಲ್ಲ ಯೋಜನೆಗಳು ಸಮ್ಮಿಶ್ರ ಸರಕಾರದಿಂದ ಜಾರಿಯಾಗಲಿದೆ. ಪಕ್ಷ ಸೋತರೂ ಬಡವರಿಗೆ ಕೆಲಸ ಮಾಡಿದೆ ತೃಪ್ತಿ ಇದೆ ಎಂದು ತಿಳಿಸಿದರು.
ನಮಗೆ ಚಿಕ್ಕವರಿದ್ದಾಗ ಅನ್ನ ಸಿಗುತ್ತಿರಲಿಲ್ಲ. ಬರಿ ಮುದ್ದೆ ತಿಂದು ಬದುಕಿದ್ದೇವೆ. ಬೀಗರು ಬಂದರೆ ಮಾತ್ರ ಅನ್ನ ಸಿಗುತ್ತಿತ್ತು. ಆದ್ದರಿಂದ ಭಾಗ್ಯ ಯೋಜನೆ ಜಾರಿ ಮಾಡಿದೆ. ಮುಂದೆ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತೇನೆ. ಚುನಾವಣೆ ನಂತರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ಸದ್ಯ ಸಿದ್ದರಾಮಯ್ಯ ಪ್ರವಾಸದ ವೇಳೆ ಮಾಜಿ ಸಚಿವರಾದ ಎಸ್ ಆರ್ ಪಾಟಿಲ್, ಆರ್ ಬಿ ತಿಮ್ಮಾಪುರ, ಮಾಜಿ ಶಾಸಕರಾದ ಹೆಚ್ ವೈ ಮೇಟಿ, ಬಿಬಿ ಚಿಮ್ಮನಕಟ್ಟಿ, ಮುಖಂಡ ದೇವರಾಜ ಪಾಟಿಲ್ ಸಾಥ್ ನೀಡಿದರು. ಕ್ಷೇತ್ರ ಪ್ರವಾಸದ ವೇಳೆ ಎಂಬಿ ಪಾಟಿಲ್ ಸಚಿವ ಸ್ಥಾನಕ್ಕೆ ಹೆಚ್ಚಿದ್ದು, ಹಲವು ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು.
ಸಮ್ಮಿಶ್ರ ಸರ್ಕಾರದಲ್ಲಿ ಹಲವು ಶಾಸಕರು ಸಚಿವ ಸ್ಥಾನ ಹಂಚಿಕೆ ಕುರಿತು ರಾಜ್ಯ ರಾಜಧಾನಿಯಲ್ಲಿ ಬಿರುಸಿನ ಚಟುವಟಿಕೆ ನಡೆಸುತ್ತಿದ್ದರೆ ಇತ್ತರ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಕ್ಷೇತ್ರ ಪ್ರವಾಸದಲ್ಲಿ ತೊಡಗಿದ್ದಾರೆ. ಆದರೆ ಇದೇ ವೇಳೆ ಕ್ಷೇತ್ರ ಪ್ರವಾಸದಲ್ಲಿದ್ದರು ಅವರ ಮೊಬೈಲ್ ನಲ್ಲಿ ಹೆಚ್ಚು ಮಾತನಾಡುತ್ತಿದದ್ದು ಕಂಡು ಬಂತು.
https://www.youtube.com/watch?v=hXCaa3lu7ho