ರಾಮನಗರಕ್ಕೆ `ಚಿತ್ರನಗರಿ’ ಸ್ಥಳಾಂತರ – ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

Public TV
1 Min Read
SIDDARAMAIAH HDK

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಎಚ್‍ಡಿಕೆ ಅವರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಪತ್ರ ಬರೆದು ಸಹಕಾರ ನೀಡುವಂತೆ ಮನವಿ ಮಾಡಿದ ಬೆನಲ್ಲೇ ಮತ್ತೊಂದು ಪತ್ರ ಬರೆದಿದ್ದು, ಈ ಹಿಂದೆ ಮೈಸೂರಿನಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಿದ್ದ ಚಿತ್ರನಗರಿಯನ್ನು ರಾಮನಗರಕ್ಕೆ ಸ್ಥಳಾಂತರ ಮಾಡದಿರಲು ಮನವಿ ಮಾಡಿದ್ದಾರೆ.

ತಮ್ಮ ಪತ್ರದಲ್ಲಿ ಈ ಕುರಿತು ಪೂರ್ಣ ಮಾಹಿತಿ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ಕನ್ನಡ ಚಿತ್ರನಗರಿ ಸ್ಥಾಪನೆಯಾಗಬೇಕೆಂಬುದು ಚಿತ್ರರಂಗದ ಬಹುವರ್ಷಗಳ ಕನಸು ಮತ್ತು ಬೇಡಿಕೆ. ಮೈಸೂರು ಪ್ರವಾಸಿ ತಾಣವಾಗಿದ್ದು, ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕಾಗಿ ಮೈಸೂರು ನಗರವನ್ನ ಇಷ್ಟಪಡುತ್ತಾರೆ. ಇಲ್ಲಿನ ಪರಿಸರ, ಐತಿಹಾಸಿಕ ಕಟ್ಟಡಗಳು ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಅದ್ದರಿಂದ ಪ್ರತಿದಿನ ಯಾವುದಾದರೊಂದು ಸಿನಿಮಾ ಚಿತ್ರೀಕರಣ ನಡೆಯುತ್ತದೆ ಎಂದು ತಿಳಿಸಿದ್ದಾರೆ.

SIDDARAMAIAH letter

ತಮ್ಮ ಪತ್ರದಲ್ಲಿ ಸಿನಿಮಾ ಕ್ಷೇತ್ರದೊಂದಿಗೆ ಮೈಸೂರು ನಗರ ಹೊಂದಿರುವ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ ಅವರು, 1945 ರಿಂದಲೂ ಇಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿನ ಸಂಸ್ಥೆಗಳು ಹಲವು ಪ್ರತಿಭಾವಂತ ನಟರು, ನಟಿಯರು ಹಾಗೂ ತಾಂತ್ರಿಕ ವರ್ಗ ಚಿತ್ರರಂಗಕ್ಕೆ ಪರಿಚಯಸಿದೆ. ಪ್ರಮುಖವಾಗಿ ನಗರದಲ್ಲಿ 16 ಅರಮನೆಗಳು, 250 ಹೆಚ್ಚು ಲೋಕೇಶನ್ ಗಳು ನದಿ, ಬೆಟ್ಟ ಸೇರಿದಂತೆ ವಿಮಾನ ನಿಲ್ದಾಣ ಸೌಲಭ್ಯವೂ ಇದ್ದು, ದೇಶ ವಿದೇಶದಿಂದ ಆಗಮಿಸುವವರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಯಾಗ ಬೇಕು ಎಂಬುವುದು ಡಾ. ರಾಜ್ ಕುಮಾರ್ ಅವರ ಕನಸಾಗಿತ್ತು. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅವರ ಆಸೆಯನ್ನು ಮನಗಂಡು ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಮಾಡಲು ಅವಕಾಶ ನೀಡಿ 100 ಎಕರೆ ಜಮೀನು ನೀಡಿ ಬಜೆಟ್‍ನಲ್ಲೂ ಮಂಡನೆ ಮಾಡಿತ್ತು. ಆದರೆ ಈ ಬಾರಿಯ ಬಜೆಟ್ ನಲ್ಲಿ ರಾಮನಗರಕ್ಕೆ ಚಿತ್ರನಗರಿ ಸ್ಥಳಾಂತರ ಮಾಡಲಾಗಿದೆ. ಅದ್ದರಿಂದ ಈ ನಿರ್ಧಾರವನ್ನು ಮರು ಪರಿಶೀಲನೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *