– ಬಿಜೆಪಿ ಸ್ವಜನ ಪಕ್ಷಪಾತ ಮಾಡಿದೆ
ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆ ಸರ್ಕಾರ ತಾರತುರಿಯಲ್ಲಿ ಚಾಣಕ್ಯ ವಿ.ವಿ ಬಿಲ್ ಪಾಸ್ ಮಾಡಿಕೊಂಡಿದೆ. ಸೆಸ್ ಎಂಬ ಸಂಸ್ಥೆ ಈ ಯೂನಿವರ್ಸಿಟಿ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಸ್ಥೆಯಲ್ಲಿ ಇರುವವರೆಲ್ಲರೂ ಆರ್‍ಎಸ್‍ಎಸ್‍ನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಆರ್‌ಎಸ್‌ಎಸ್(RSS) ವಿರುದ್ಧ ಗುಡುಗಿದ್ದಾರೆ.
Advertisement
ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಕಚೇರಿಯಲ್ಲಿ ಈ ಬಗ್ಗೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಚಾಣಕ್ಯ ಯೂನಿವರ್ಸಿಟಿಗೆ ಭೂಮಿ ನೀಡಿರುವುದು ಒಂದು ದೊಡ್ಡ ಹಗರಣ. ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ನೀಡಲಾಗಿದೆ. ನಾನು ಚಾಣಕ್ಯ ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರು ಏನು ಅಂತ ನಿಮಗೆ ಗೊತ್ತು. ಚಾಣಕ್ಯ ಮನುವಾದಿ ಕುಟುಂಬಕ್ಕೆ ಸೇರಿದವರು. ಈ ಯೂನಿವರ್ಸಿಟಿ ಮನುವಾದಿ ಯುನಿವರ್ಸಿಟಿ. ಚತುರ್ವರ್ಣ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಮುಂದಾಗಿದ್ದಾರೆ. ರೈತರಿಂದ ಜಮೀನು ಕಿತ್ತುಕೊಂಡು ಮನುವಾದಿಗಳಿಗೆ ಕಡಿಮೆ ಬೆಲೆಗೆ ಕೊಡುವ ಮೂಲಕ ಸರ್ಕಾರ ಲೂಟಿ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್
Advertisement
Advertisement
ಈ ವಿಧೇಯಕ ಮಂಡನೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆ ಸರ್ಕಾರ ಬಿಲ್ ಪಾಸ್ ಮಾಡಿಕೊಂಡಿತ್ತು. ಸರ್ಕಾರದ ಬಿಲ್ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತ್ತು. ಚಾಣಕ್ಯ ವಿವಿ ಬಿಲ್ ಧ್ವನಿ ಮತದಿಂದ ಪಾಸ್ ಮಾಡಿಕೊಂಡಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ಪಾಸ್ ಮಾಡಿಕೊಂಡಿದ್ದಾರೆ. ಚಾಣಕ್ಯ ವಿವಿ ಮಾಡುತ್ತಿರುವುದು ಸೆಸ್ ಎಂಬ ಸಂಸ್ಥೆ (ಸೆಂಟರ್ ಫಾರ್ ಎಜುಕೇಶನ್ ಆ್ಯಂಡ್ ಸೋಶಿಯಲ್ ಸ್ಟಡಿ ಸಂಸ್ಥೆ) ಈ ಸಂಸ್ಥೆಯಲ್ಲಿ ಇರುವವರು ಎಲ್ಲರೂ ಆರ್‌ಎಸ್‌ಎಸ್‌ನವರು. ಶ್ರೀಧರ್, ದೀವಾಕರ್ ಶಿವಕುಮಾರ್, ರಾಜೇಂದ್ರ ಸೇರಿದಂತೆ ಅನೇಕರಿದ್ದಾರೆ. ಯಾರು ಕೂಡ ಎಜುಕೇಶನ್ ಸಂಸ್ಥೆ ನಡೆಸುತ್ತಿಲ್ಲ. ಈ ಸೆಸ್ ಸಂಸ್ಥೆಗೆ ಬಿಜೆಪಿ ಸರ್ಕಾರ 2021ರ ಏಪ್ರಿಲ್ 26ರಂದು ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಕೆಐಡಿಬಿಗೆ ಸೇರಿದ ಜಮೀನು, ಏರೋಸ್ಪೇಸ್ ಮಾಡೋಕೆ ಮಿಸಲಿಟ್ಟ ಜಮೀನು ನೀಡಲು ನಿರ್ಧರಿಸಿದೆ. ದೇವನಹಳ್ಳಿ ಹತ್ರ ಜಮೀನು ಇದೆ. 116 ಎಕರೆ ಜಮೀನನ್ನು ಸರ್ಕಾರ ಸೆಸ್ ಸಂಸ್ಥೆಗೆ ಕೊಟ್ಟಿದೆ ಎಂದು ಆರೋಪಿಸಿದರು. ಇದನ್ನೂ ಓದಿ: 7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ: ಶ್ರೀರಾಮುಲು
Advertisement
ರೈತರಿಗೆ ಒಂದು ಕೋಟಿ ಐವತ್ತುಲಕ್ಷ ರೂಪಾಯಿ ಒಂದು ಎಕರೆಗೆ ಪರಿಹಾರ ಕೊಟ್ಟಿದ್ದಾರೆ. ಸೆಸ್ ಸಂಸ್ಥೆಗೆ ಕೇವಲ ಐವತ್ತು ಕೋಟಿಗೆ ಕೊಟ್ಟಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ಪರಿಹಾರ ಕೊಟ್ಟಿದೆ. ಖರೀದಿ ಬಳಿಕ ಭೂಮಿ ಬೆಲೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಭೂಮಿ ಬೆಲೆ 300 ರಿಂದ 400 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಆದರೆ ಸರ್ಕಾರ ಆರ್‌ಎಸ್‌ಎಸ್‌ಗೆ ಸೇರಿದವರಿಗೆ ಬಳುವಳಿಯಾಗಿ ಕೊಟ್ಟಿದೆ. ಇದೊಂದು ದೊಡ್ಡ ಹಗರಣ ಅವರಿಗೆ ಎಜುಕೇಷನ್ ಸಂಸ್ಥೆಗಳು ಇದ್ದು, ಈಗ ನಿಯಮಾವಳಿ ಪ್ರಕಾರ ಮಾಡಿದ್ದರೆ, ನಮ್ಮ ತಕರಾರು ಇಲ್ಲ. ಆದರೆ ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ಕೊಟ್ಟಿದ್ದಾರೆ. ಜಮೀನು ಈಗಿನ ಬೆಲೆ ನೋಡಿ ಜಮೀನು ಕೊಡಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಆತುರವಾಗಿ ಕೊಟ್ಟಿದ್ದಾರೆ. ಇದು ಮನುವಾದಿಗಳ ವಿಶ್ವ ವಿದ್ಯಾಲಯ ಆಗುತ್ತದೆ ಹಾಗಾಗಿ ಯಾವುದೇ ಚರ್ಚೆಯಿಲ್ಲದೆ ಭೂಮಿ ಕೊಟ್ಟಿದ್ದಾರೆ. ಸ್ಪೀಕರ್ ಬಿಲ್ ಪಾಸ್ ಮಾಡಿದ್ದಾರೆ. ಇನ್ನೂ ಹಲವು ಬಿಲ್ ಇತ್ತು ಅದನ್ನು ಬಿಟ್ಟು ಈ ಬಿಲ್ ಪಾಸ್ ಮಾಡಿದ್ದಾರೆ. ಸ್ಪೀಕರ್ ಯಾವುದೇ ರಾಜಕೀಯ ಚಟುವಟಿಕೆಗೆ ಸೇರಿದವರಲ್ಲ. ಒಂದು ಪಕ್ಷದ ಪರವಾಗಿ ನಡೆದು ಕೊಳ್ಳಬಾರದು ಎಂದು ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಭೂಮಿ ಕೊಟ್ಟು ಸರ್ಕಾರ ಲೂಟಿ ಮಾಡಿದೆ. ಬಿಜೆಪಿ ಸ್ವಜನ ಪಕ್ಷಪಾತ ಮಾಡಿದೆ. ಕೂಡಲೇ ಸರ್ಕಾರ ಬಿಲ್ ರದ್ದು ಮಾಡಬೇಕು. ಕೊರೊನಾ ಎಂದು ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಬಿಲ್ ಪಾಸ್ ಮಾಡಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ತೀರ್ವವಾಗಿ ವಿರೋಧಿಸುತ್ತದೆ. ಚರ್ಚೆಗೆ ಅವಕಾಶ ಕೊಡದೆ ಪಾಸ್ ಮಾಡಿದ್ದಾರೆ. ಸ್ಪೀಕರ್ ಗೆ ನಾನು ಪರಿಪರಿಯಾಗಿ ಬೇಡಿಕೊಂಡೆ ಚರ್ಚೆಗೆ ಅವಕಾಶವನ್ನು ಕೊಡಿ ಎಂದು ಇದೇನು ಜನರಿಗೆ ಸದ್ಯಕ್ಕೆ ಅವಶ್ಯಕತೆ ಇತ್ತಾ? ನಾವು ಲೀಗಲ್ ಆಗಿ ಕೂಡ ಫೈಟ್ ಮಾಡುತ್ತೇವೆ. ಪಕ್ಷದ ವತಿಯಿಂತ ಹೋರಾಟವನ್ನೂ ನಡೆಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ರಮೇಶ್ ಕುಮಾರ್, ಕೆ.ಜೆ.ಜಾರ್ಜ್ ಉಪಸ್ಥಿತರಿದ್ದರು.ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ