ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಆರ್‌ಎಸ್‌ಎಸ್ ತಾಲಿಬಾನ್ ಹೋಲಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್
Advertisement
ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಮೋಹನ ಚಂದ ಎಂಬ ಇನ್ಸ್‌ಪೆಕ್ಟರ್ ಸತ್ತಾಗ ಸೋನಿಯಾ ಗಾಂಧಿ ಅತ್ತಿರಲಿಲ್ಲ, ಆದರೆ ಟೆರರಿಸ್ಟ್ ಸತ್ತಾಗ ಅತ್ತಿದ್ದರು ಎಂದಿದ್ದಾರೆ.
Advertisement
Advertisement
ಸಿದ್ದರಾಮಯ್ಯನವರು ಮುಸಲ್ಮಾನರ ತುಷ್ಟಿಕರಣಕ್ಕಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಅವರಿಗೆ ಆರ್‌ಎಸ್‌ಎಸ್ ಎಂದರೆ ಏನು ಗೊತ್ತು? ನಾನು ಹಾಗೂ ದೇಶದ ಪ್ರಧಾನಿ ಆರ್‌ಎಸ್‌ಎಸ್‍ನವರು, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳುತ್ತಾರೆ. ಇದರಿಂದಲೇ ಕಾಂಗ್ರೆಸ್ ಪಕ್ಷ ಬಹಳ ನಷ್ಟ ಅನುಭವಿಸುತ್ತಿದೆ. ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಈಗಲು ಸುಧಾರಿಸದೇ ಇದ್ದರೆ, ಜನ ದಾರಿ ತೋರಿಸುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ನಟ ನಿನಾಸಂ ಸತೀಶ್‍ಗೆ ಮಾತೃ ವಿಯೋಗ
Advertisement
ದೇಶದ ಜನಕ್ಕೆ ಆರ್‌ಎಸ್‌ಎಸ್ ಬಿಜೆಪಿ ಅಂದರೆ ಏನು ಅಂತ ಗೊತ್ತಿದೆ. ಸಿದ್ದರಾಮಯ್ಯ ಗೌರವಾನ್ವಿತ ಲೀಡರ್, ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವ ಇದೆ. ಮಾತನಾಡುವ ಮುನ್ನ ಇತಿಮಿತಿಯಿಂದ ಮಾತನಾಡಬೇಕು. ಕಾಂಗ್ರೆಸ್‍ನವರು ಐಎಸ್‍ಐ ಏಜೆಂಟ್ ಅಂದರೆ ಏನು ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆ ಯತ್ನ- ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಧನ
ರಾಜ್ಯದಲ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಎರಡು ಕಡೆ ತಯಾರಿ ನಡೆದಿದೆ. ಯಾರಿಗೆ ಅಭ್ಯರ್ಥಿ ಮಾಡಬೇಕು ಎಂದು ಸರ್ವೇ ನಡೆದಿದೆ. ಎಲ್ಲವನ್ನು ಆಧಾರ ಇಟ್ಟುಕೊಂಡು ಎಲ್ಲರೂ ಸೇರಿ ಕೇಂದ್ರಕ್ಕೆ ಹೆಸರು ಕಳಿಸುತ್ತೇವೆ ಎಂದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರಿಗೆ ನಿರ್ವಹಣೆ ಗೊತ್ತಿಲ್ಲ, ನಾವೂ ಕೂಡಾ ಕೆಲ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಿದ್ದೇವೆ, ನಾವು ಅತ್ಯಂತ ಗೌರವದಿಂದ ನೋಡಿಕೊಂಡು ಚರ್ಚೆ ಮಾಡಿದ್ದೇವೆ, ರಾಹುಲ್ ಹಾಗೂ ಪ್ರಿಯಾಂಕಾ ಅತೀರತರು ಎಂದು ತಿಳಿದುಕೊಂಡ ದುರಹಂಕಾರದ ಪರಿಣಾಮ ಅಮರಿಂದರ್ ಸಿಂಗ್ ಹೊರ ಬಂದಿದ್ದು ಎಂದು ಹೇಳಿದ್ದಾರೆ.