– ಪಕ್ಷಕ್ಕಾಗಿ ರಕ್ತ, ಬೆವರು ಕೊಟ್ಟಿದ್ದೇನೆ, 2 ವರ್ಷದಿಂದ ನಿದ್ರೆ ಮಾಡಿಲ್ಲ
– ಪಬ್ಲಿಕ್ ಟಿವಿ ವಿಶೇಷ ಸಂದರ್ಶನದಲ್ಲಿ ಡಿಕೆಶಿ ಮಾತು-ಕತೆ
– ಪಬ್ಲಿಕ್ ಟಿವಿ ವಿಶೇಷ ಸಂದರ್ಶನದಲ್ಲಿ ಡಿಕೆಶಿ ಮಾತು-ಕತೆ
ಬೆಂಗಳೂರು: ಒಬ್ಬ ವ್ಯಕ್ತಿಗೆ ಧರ್ಮ ಪ್ರೀತಿ ವಿಶ್ವಾಸ ನಂಬಿಕೆ ಮನುಷ್ಯತ್ವ ಎಲ್ಲಾ ಇರಬೇಕು. ಸಿದ್ದರಾಮಯ್ಯ ಅವರ ಕೈ ಕೆಳಗೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಶುಭ ಹಾರೈಸಿದ್ದೇನೆ. ಒಬ್ಬ ಹಿರಿಯಣ್ಣನಿಗೆ ಹೇಗೆ ಹಾರೈಸಬೇಕೋ ಹಾಗೇ ಸಿದ್ದರಾಮಯ್ಯಗೆ ಶುಭ ಕೋರಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿಯೂ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಣಗಾನ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯರನ್ನ ಬಾಚಿ ತಬ್ಬಿಕೊಂಡರೆ ತಪ್ಪೇನಿದೆ. ಒಬ್ಬ ವ್ಯಕ್ತಿಗೆ ಧರ್ಮ ಪ್ರೀತಿ ವಿಶ್ವಾಸ ನಂಬಿಕೆ ಮನುಷ್ಯತ್ವ ಎಲ್ಲಾ ಇರಬೇಕಲ್ಲ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಸಿದ್ದರಾಮೋತ್ಸವ ನನಗಷ್ಟೇ ಅಲ್ಲಾ ಇಡೀ ರಾಜ್ಯದ ಜನರಿಗೆ ಖುಷಿ ತಂದಿದೆ ತುಂಬು ಹೃದಯದಿಂದ ಹಾರೈಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕೈ ಎತ್ತಿಸಿಕೊಂಡು ಬೆನ್ನಿಗೆ ಚೂರಿ ಹಾಕಿಸಿಕೊಂಡಿಲ್ವಾ?- ಕೈ ನಾಯಕರ ಒಗ್ಗಟ್ಟಿನ ಮಂತ್ರಕ್ಕೆ ಹೆಚ್‍ಡಿಕೆ ಟಾಂಗ್
Advertisement
Advertisement
ಗಾಂಧಾರಿ ತರ ಕೂತಿಲ್ಲ: ನಾನು ಪಕ್ಷದ ನಾಯಕರ ವಿಚಾರದಲ್ಲಿ ಗಾಂಧಾರಿ ತರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿಲ್ಲ ಎಲ್ಲಾ ಬೆಳವಣಿಗೆಯ ಬಗ್ಗೆಯೂ ನನಗೆ ಗೊತ್ತಿದೆ. ಧರ್ಮ ಸಿಂಗ್ ಸರ್ಕಾರದಲ್ಲಿ ನನ್ನನ್ನ ಮಂತ್ರಿ ಆಗದಂತೆ ತಡೆಯಬೇಕು ಅಂತ ಆಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಆಮೇಲೆ ಸಿದ್ದರಾಮಯ್ಯನವರೇ ಕರೆದು ಡಿಕೆ ನೀನು ಯಾವಾಗ ಸ್ವೇರಿಂಗ್ ತಗೋತಿಯ ಅಂತ ಕರೆದು ಕೊಡಲಿಲ್ವಾ? ಅವತ್ತು ನನ್ನ ಪರವಾಗಿ ಒಬ್ಬ ಶಾಸಕನೂ ಮಾತನಾಡಲಿಲ್ಲ. ನನಗೆ ನನ್ನ ಸಾಮರ್ಥ್ಯದ ಬಗ್ಗೆಯೂ ಗೊತ್ತು, ದೌರ್ಬಲ್ಯದ ಬಗ್ಗೆಯೂ ಗೊತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾಳೆ ಉಡುಪಿ, ದ. ಕನ್ನಡ, ಉ.ಕನ್ನಡ, ಕೊಡಗು, ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಜಾರಿ: ಎಷ್ಟು ಮಳೆಯಾಗಬಹುದು?
Advertisement
ನಾನು ಜೈಲಿಗೆ ಹೋದಾಗ ಬಸವನ ಗುಡಿಯಲ್ಲಿ ನನ್ನ ಪರ ಜನ ಸೇರಿದ್ದಾರಾ ಇಲ್ವಾ ಅಂತ ನೋಡಿ ವೇದಿಕೆಗೆ ಹೋದರು. ಜನ ಸೇರಿದ್ದಾರೆ ಅಂತ ಗೊತ್ತಾದ ಮೇಲೆ ಕೆಲವು ನಾಯಕರು ವೇದಿಕೆಗೆ ಹೋದ್ರು, ಎಲ್ಲಾ ನನಗೆ ಗೊತ್ತಿದೆ. ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿಲ್ಲ. ನಾನು ಗಾಂಧಾರಿ ತರ ಬಟ್ಟೆ ಕಟ್ಟಿಕೊಂಡಿಲ್ಲ ಎಲ್ಲಾ ಗೊತ್ತಿದೆ ಎಂದು ಪಕ್ಷದ ನಾಯಕರ ಬಗ್ಗೆಯೆ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಎಷ್ಟೇ ಸಿದ್ದರಾಮೋತ್ಸವ ಮಾಡಿದ್ರೂ 2023ರಲ್ಲಿ ಅಧಿಕಾರಕ್ಕೆ ಬರೋದೇ ಬಿಜೆಪಿ – ಆರಗ ಜ್ಞಾನೇಂದ್ರ ಭವಿಷ್ಯ
ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ: ನಾನು ಜೀವನದಲ್ಲಿ ಯಾರಿಗೂ ಬೆನ್ನಿಗೆ ಚೂರಿ ಹಾಕಿಲ್ಲ. ಬೇರೆಯವರು ನನಗೆ ಹಿಂದಿನಿಂದ ಚಾಕು ಹಾಕಿದ್ದಾರೆ. ನನಗೆ ಏಟು, ಚಾಕು ಹಾಕಿದವರು ಪ್ರತಿದಿನ ಚುಚ್ಚಿ-ಚುಚ್ಚಿ ಬಿಡ್ತಿದ್ದಾರೆ. `ಪಾರ್ಟ್ ಆಫ್ ಮೈ ಲೈಫ್’ ಆದರೆ ಏನು ಮಾಡೋದು ನನಗಿರುವ ಧೈರ್ಯ ನನಗಿರುವ ಬಂಡತನ ನನಗಿರುವ ಶಕ್ತಿ ಎಲ್ಲರಿಗೂ ಇರೋಕೆ ಸಾಧ್ಯ ಇಲ್ಲ ಎಂದರು.
ನಾನಲ್ಲದೆ ಬೇರೆಯವರಾಗಿದ್ದರೆ ರಾಜಕಾರಣವನ್ನೇ ಬಿಟ್ಟು ಬಿಡುತಿದ್ದರು ಇಷ್ಟೊತ್ತಿಗೆ. ನನಗೆ ನನ್ನ ಕುಟುಂಬಕ್ಕೆ ನನ್ನ ಸ್ನೇಹಿತರಿಗೆ ಆಗುತ್ತಿರುವ ಕಿರುಕುಳ ಹೇಳೋಕೆ ಆಗಲ್ಲ. 44 ಶಾಸಕರನ್ನ ಕಾಯ್ಕೊಂಡು ಕೂರೋಕೆ ಹೇಳಿದ್ರಲ್ಲ ಕಾದಿದ್ದೆ ತಪ್ಪಾ? ಇದನ್ನೆಲ್ಲಾ ಫೇಸ್ ಮಾಡಲೇಬೇಕು ಮಾಡ್ತೀನಿ ಎಂದು ಡಿಕೆ ಶಿವಕುಮಾರ್ ಶಪಥ ಮಾಡಿದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]