ಬಾಗಲಕೋಟೆ: ಸಿದ್ದರಾಮಯ್ಯ (Siddaramaiah) ಹಾಗೂ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು. ಈಗ ಅವರು ಏನು ಮಾತನಾಡುತ್ತಾರೋ ಎನ್ನುವುದು ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ಈಗ ಮರೆವು ಜಾಸ್ತಿಯಾಗಿದೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ (V Somanna) ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರು ಏನಾದರೂ ಕೇಳಿದರೆ ಹಾಂ ಅಂತಾರೆ. ಮರೆವಿನಲ್ಲಿ ಇನ್ಯಾರನ್ನೋ ತೃಪ್ತಿ ಪಡಿಸಲು ಹೋಗಿ ಏನೋ ಹೇಳುತ್ತಾರೆ. ನನ್ನನ್ನು ಎಲ್ಲಿ ತೆಗೆದುಬಿಡುತ್ತಾರೋ ಅಂದುಕೊಂಡು ಏನೇನೋ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಅತ್ಯಾಚಾರ ಕೇಸ್ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್
ನಾನು ಸಿದ್ದರಾಮಯ್ಯ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವತ್ತಿನ ಸಿದ್ದರಾಮಯ್ಯನೇ ಬೇರೆ ಇವತ್ತಿನ ಸಿದ್ದರಾಮಯ್ಯನೆ ಬೇರೆ. ನಾವೆಲ್ಲ ಈ ದೇಶದ ಮಣ್ಣಿನ ಮಕ್ಕಳು. ಭಾರತ ದೇಶಕ್ಕೆ ಸಣ್ಣ ಅಪಚಾರ ಮಾಡಿದರೂ ಭಾರತಾಂಬೆ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಂಧೂರ ಅಳಿಸಲು ಹೊರಟವರನ್ನ ಮಣ್ಣಿನಲ್ಲಿ ಹೂತಿದ್ದೇವೆ: ಮೋದಿ
ಮೋದಿ ಆಪರೇಷನ್ ಸಿಂಧೂರ (Operation Sindoor) ವಿಚಾರದಲ್ಲಿ ಕೈಗೊಂಡ ತೀರ್ಮಾನಕ್ಕೆ ನಾವು ತಲೆ ಬಾಗಬೇಕು. ತಲೆಬಾಗದೇ ಇದ್ದರೆ ಬಾಕಿದ್ದನ್ನು ನೀವೇ ತೀರ್ಮಾನ ಮಾಡಿ. ಮೋದಿ (Modi) ತೆಗೆದುಕೊಂಡ ತೀರ್ಮಾನಕ್ಕೆ ಅಪಚಾರ ಮಾಡುವುನ್ನು ಬಿಡಿ. ಕೈ ಬಿಡದೇ ಇದ್ದರೆ ಮುಂದೆ ಯಾರು ನಿಮ್ಮನ್ನು ಮೂಸುವವರು ಇಲ್ಲ. ಇಲ್ಲ ನಿಮಗೆ ಮಾರ್ಕೆಟ್ ಇಲ್ಲ ಎಂದರು.