ಉಡುಪಿ: ಸಿದ್ದರಾಮಯ್ಯ (Siddaramaiah) 135 ಕ್ಷೇತ್ರಗಳ ಮುಖ್ಯಮಂತ್ರಿ ಅಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಸಮಾನವಾಗಿ ನೋಡಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಸಿದ್ದರಾಮಯ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಬೊಮ್ಮಾಯಿ (Basavaraj Bommai) ಸರ್ಕಾರ ದಿ.ಪ್ರವೀಣ್ ನೆಟ್ಟಾರು (Praveen Nettaru) ಅವರ ಪತ್ನಿಗೆ ಗ್ರೂಪ್ ಸಿ ಹುದ್ದೆ ನೀಡಿತ್ತು. ಆದರೆ ಈಗ ಅವರನ್ನು ಉದ್ಯೋಗದಿಂದ ಕೊಕ್ ಮಾಡಲಾಗಿದೆ. ಈ ಕುರಿತು ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ (Congress) ನಿಜವಾದ ಬಣ್ಣ ಬಯಲಾಗಿದೆ. ಜನತೆಗೆ ಆಶ್ವಾಸನೆ ಕೊಟ್ಟ ಭಾಗ್ಯಗಳನ್ನು ಮೊದಲು ಈಡೇರಿಸಿ. ಜನರ ದಿಕ್ಕು ತಪ್ಪಿಸಲು ಹಲವಾರು ಹೇಳಿಕೆ ಹಾಗೂ ಚಟುವಟಿಕೆಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿತ್ತುಕೊಂಡ ನೆಟ್ಟಾರು ಪತ್ನಿಯ ಉದ್ಯೋಗವನ್ನು ಮರಳಿ ನೀಡಿ: ಸಿದ್ದರಾಮಯ್ಯಗೆ ಕಟೀಲ್ ಮನವಿ
Advertisement
Advertisement
ಪಿಎಫ್‌ಐ (PFI) ಸಂಘಟನೆಯ ದುಷ್ಕೃತ್ಯದಿಂದ ಪ್ರವೀಣ್ ನೆಟ್ಟಾರು ಅವರನ್ನು ಕಳೆದುಕೊಂಡಿದ್ದೇವೆ. ಇಂತಹ ಕೃತ್ಯಗಳಿಗೆ ಕೈ ಹಾಕಿದಾಗ ಜನತೆ ಸರ್ಕಾರಕ್ಕೆ ಸೂಕ್ತ ಉತ್ತರ ಕೊಡುತ್ತಾರೆ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಅನಿಸುತ್ತಿದೆ. ನಾವು ವಿಪಕ್ಷದಲ್ಲಿ ಇದ್ದುಕೊಂಡು ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಮತ್ತು ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ. ಪ್ರವೀಣ್ ಪತ್ನಿಗೆ ಸ್ವ-ಉದ್ಯೋಗವನ್ನಾದರೂ ನಾವು ಕಲ್ಪಿಸುತ್ತೇವೆ. ಪ್ರವೀಣ್ ನೆಟ್ಟಾರು ಕುಟುಂಬದ ಜೊತೆ ಬಿಜೆಪಿ (BJP) ಎಂದಿಗೂ ಇರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 225 ಮೊಬೈಲ್ ಟವರ್ ಮಂಜೂರು : ಬಿವೈ ರಾಘವೇಂದ್ರ
Advertisement