ವಿಶ್ವನಾಥ್‍ಗೆ ಹೊಟ್ಟೆ ಕಿಚ್ಚು, ಆತನಿಗೆ ಏನು ಗೊತ್ತಿಲ್ಲ: ಏಕವಚನದಲ್ಲೇ ಸಿದ್ದರಾಮಯ್ಯ ತಿರುಗೇಟು

Public TV
1 Min Read
Siddu H.Vishwanath

ಕಲಬುರಗಿ: ವಿಶ್ವನಾಥ್‍ಗೆ ಹೊಟ್ಟೆಕಿಚ್ಚು ಇದ್ದು, ಆತನಿಗೆ ಏನು ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಏಕ ವಚನದಲ್ಲೇ ತಿರುಗೇಟು ನೀಡಿದ್ದಾರೆ.

ಚಿಂಚೋಳಿಯ ಕೊಡದುರ ಗ್ರಾಮದಲ್ಲಿ ಕೈ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳು ನೀವು ಜನಪ್ರಿಯ ಸಿಎಂ ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ ಎಂದಾಗ, ಜನಪ್ರಿಯ ಸಿಎಂ ಎಂದು ನಾನು ಹೇಳಿಲ್ಲ. ಜನ ಈ ಹೇಳಿಕೆ ನೀಡಿದ್ದಾರೆ. ವಿಶ್ವನಾಥ್‍ಗೆ ಹೊಟ್ಟೆ ಕಿಚ್ಚು. ಆತನಿಗೆ ಏನು ಗೊತ್ತಿಲ್ಲ. ಆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದರು.ಇದನ್ನೂ ಓದಿ:ಒಳ್ಳೆಯ ಆಡಳಿತ ನೀಡಿದ್ರೆ ಯಾಕೆ 78ಕ್ಕೆ ಇಳಿಯಿತು – ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗರಂ

collage siddu

ಉತ್ತಮ ಆಡಳಿತ ನೀಡಿದ್ರೆ 78 ಸ್ಥಾನ ಯಾಕೆ ಬಂತು ಎಂದು ವಿಶ್ವನಾಥ್ ಹೇಳಿಕೆಗೆ, ಬಿಜೆಪಿಯವರ ಅಪ ಪ್ರಚಾರದಿಂದ ನಮಗೆ ಕಡಿಮೆ ಸ್ಥಾನ ಬಂದಿದೆ. ಎಸ್‍ಎಂ ಕೃಷ್ಣ ಅವಧಿಯಲ್ಲಿ ವಿಶ್ವನಾಥ್ ಮಂತ್ರಿ ಆಗಿದ್ದರು. ನಂತರದ ಚುನಾವಣೆಯಲ್ಲಿ 65 ಸ್ಥಾನ ಯಾಕೆ ಬಂತು ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.

siddu

ಆರಂಭದಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ನಂತರ ಮಾಧ್ಯಮಗಳು ವಿಶ್ವನಾಥ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದಾಗ ಏಕವಚನದಲ್ಲೇ ಆತನಿಗೆ ಹೊಟ್ಟೆ ಕಿಚ್ಚು ಎಂದು ಹೇಳಿ ತಿರುಗೇಟು ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *